ರಾಜ್ಯ ಮಟ್ಟಕ್ಕೆ ಆದಿಲ್ ಆಯ್ಕೆ

aadil
Published on

ಮಡಿಕೇರಿ: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್(ಎಸ್‌ಎಸ್‌ಎಫ್) ಆಶ್ರಯದಲ್ಲಿ ಇತ್ತೀಚೆಗೆ ನೆಲ್ಲಿಹುದಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಸಾಹಿತ್ಯೋತ್ಸವದಲ್ಲಿ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಅರಬಿ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಬಿ.ಎ.ಆದಿಲ್ ರಸ ಪ್ರಶ್ನೆ ವಿಭಾಗದಲ್ಲಿ ವಿಜೇತನಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.


ಪಾಲಿ ಬೆಟ್ಟದ ಲೂರ್ಡ್ಸ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿಯಾಗಿರುವ ಆದಿಲ್, ಫೆ.೯ ರಿಂದ ೧೧ರವರೆಗೆ ಉತ್ತರ ಕರ್ನಾಟಕದ ಭಟ್ಕಳದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾನೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಆದಿಲ್ ಪಾಲಿಬೆಟ್ಟದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಯು.ಕೆ.ಅಶ್ರಫ್ ಹಾಗೂ ಅತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಲೀನಾ ದಂಪತಿಗಳ ಪುತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net