ಪ್ರತಿಭಟನೆ, ಸಂರ್ಷಗಳಿಂದ ಸವಾಜ ಕಟ್ಟಲು ಸಾಧ್ಯವಿಲ್ಲ

18 mbl ph 2
Published on

ಮುಳಬಾಗಿಲು: ರಾವಾಯಣ, ಮಹಾಭಾರತ ಕಾಲಕ್ಕಿಂತಲೂ ಮುಂಚೆ ಆದಿಜಾಂಬವಂತ ಮಹರ್ಷಿಗಳು ಜನ್ಮವೆತ್ತಿ ಸೃಷ್ಟಿಯಲ್ಲಿ ಲಯವನ್ನು ಗಟ್ಟಿಗೊಳಿಸುವ ಮೂಲಕ ಭೂಮಿ ಸೃಷ್ಟಿಗೆ ಕಾರಣಕರ್ತರಾಗಿದ್ದರು ಎಂದು ಹಿರಿಯೂರು ಶ್ರೀ ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಆವನಿ ಗ್ರಾಮದ ಸೀತಾಪಾರ್ವತಿ ಬೆಟ್ಟದ ತಪ್ಪಲಿನಲ್ಲಿರುವ ಆದಿಜಾಂಬವಂತ ದೇವಾಲಯದಲ್ಲಿ ಆಯೋಜಿಸಿದ್ದ ಪ್ರಥಮ ಪೂಜೆ ಕಾರ್ಯಕ್ರಮದ ನಂತರ ಆದಿಜಾಂಬವಂತ ಮಠದ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ವಾತನಾಡಿದರು.

ಪ್ರತಿಭಟನೆ, ಸಂರ್ಷಗಳ ಮೂಲಕ ಸವಾಜ ಕಟ್ಟಲು ಸಾಧ್ಯವಿಲ್ಲ, ಸೌಹಾರ್ದದಿಂದಲೇ ಉತ್ತಮ ಸವಾಜ ನಿರ್ವಾಣ ಸಾಧ್ಯ. ಹಿಂದುಳಿದ, ಶೋಷಿತ ದಲಿತ, ಜಾತಿಗಳು ಮುಖ್ಯವಾಹಿನಿಗೆ ಬರಲು ಶಿಕ್ಷಣ ಅತಿಮುಖ್ಯ ಹಾಗೂ ಧಾರ್ಮಿಕ ಪರಂಪರೆ ಅನುಸರಿಸುವುದು ಪ್ರಮುಖ. ಈ ನಿಟ್ಟಿನಲ್ಲಿ ವಾದಾರ ಸಮುದಾಯ ಕಾರ್ಯೋನ್ಮುಖವಾಗಬೇಕು ಎಂದರು.

ನಮ್ಮದು ಸವಾಜದಲ್ಲಿ ಶ್ರೇಷ್ಠ ಸಮುದಾಯವಾಗಿದ್ದು ಕಾಲಕ್ರಮೇಣ ಕೆಲ ಏರುಪೇರುಗಳಿಂದ ವ್ಯತ್ಯಾಸವಾಗಿದೆ. ಅವು ಪುನರಾವರ್ತನೆಯಾಗಬಾರದು. ಈ ಹಿಂದೆ ಅನ್ಯ ಸವಾಜದವರು ವಾದಿಗ ಎಂದು ಕರೆದಾಗ ಜಾತಿ ನಿಂದನೆ ಕೇಸು ಹಾಕಿದ ಪರಿಣಾಮ ಕೆಟ್ಟ ಹೆಸರು ಬಂದಿದೆ. ಈಗ ನಾವೇ ನಮ್ಮ ಜಾತಿಯನ್ನು ಗಟ್ಟಿ ಧ್ವನಿಯಲ್ಲಿ ಹೇಳುತ್ತೇವೆ. ಬೇರೆ ಜಾತಿಯವರೊಂದಿಗೆ ಹೊಂದಿಕೊಂಡು ನಮ್ಮ ಸವಾಜವನ್ನು ಬೆಳೆಸಬೇಕು. ವಿವಿಧ ಕ್ಷೇತ್ರದಲ್ಲಿ ಸಮುದಾಯದವರು ಮುಂಚೂಣಿಗೆ ಬರಬೇಕು ಎಂದರು.

ಸಂಸದ ಎ.ನಾರಾಯಣಸ್ವಾಮಿ ವಾತನಾಡಿ, 10 ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಆವನಿಯಲ್ಲಿ ಆದಿಜಾಂಬವಂತ ದೇವಾಲಯದ ಬಗ್ಗೆ ವಾಹಿತಿ ನೀಡುವವರೇ ಇಲ್ಲವಾಗಿತ್ತು. ಈಗ ಗಮನಕ್ಕೆ ಬಂದಿದ್ದು, ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆ ವಾಡಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಆನೇಕಲ್ ಪುರಸಭೆ ವಾಜಿ ಅಧ್ಯಕ್ಷ ಸತ್ಯೇಂದ್ರಕುವಾರ್, ಬೆಂಗಳೂರಿನ ನಾಗಶೆಟ್ಟಿಹಳ್ಳಿ ಶನೈಶ್ಚರ ದೇವಾಲಯ ಪ್ರಧಾನ ಅರ್ಚಕ ಮುನಿನರಸಯ್ಯ ಸ್ವಾಮಿ, ಆದಿಜಾಂಬವಮಠದ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಎಂ.ಚಿಕ್ಕವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಆರ್.ಚಂದ್ರಪ್ಪ, ಖಜಾಂಚಿ ವಿ.ನಾಗರಾಜ್, ಕಾರ್ಯಾಧ್ಯಕ್ಷ ಡಾ.ಎಚ್.ಎಂ.ಸುಬ್ಬರಾಜು, ಉಪಾಧ್ಯಕ್ಷರಾದ ಎಚ್.ವೆಂಕಟರಾಮಪ್ಪ, ಎನ್.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಆರ್.ಹನುಮಪ್ಪ, ಮುಖಂಡರಾದ ಅಶ್ವತ್ಥಪ್ಪ, ಎ.ವಿ.ರಾಮಚಂದ್ರಪ್ಪ, ತಮ್ಮೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net