ಜು.10ರಿಂದ ಕೃತಕ ಕೈ, ಕಾಲು ಜೋಡಣೆ ಶಿಬಿರ: ಆದಿಚುಂಚನಗಿರಿ ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಎಂ.ಶಿವಕುಮಾರ್ ಮಾಹಿತಿ

Adichunchanagiri Hospital Chief Press Conference Mandya
Published on

ಮಂಡ್ಯ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಜು.10ರಿಂದ 20ರವರೆಗೆ ನಾಗಮಂಗಲ ತಾಲೂಕು ಆದಿಚುಂಚನಗಿರಿ ವೈದ್ಯಕೀಯ ಸಂಸ್ಥೆಯಲ್ಲಿ ಉಚಿತವಾಗಿ ಕೃತಕ ಕೈ ಮತ್ತು ಕಾಲು ಜೋಡಣೆ ಶಿಬಿರ ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಎಂ.ಶಿವಕುಮಾರ್ ತಿಳಿಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ಆಸ್ಪತ್ರೆಯ ವತಿಯಿಂದ ಕರ್ನಾಟಕ ಮಾರವಾಡಿ ಯೂತ್ ಫೆಡರೇಷನ್ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಪಘಾತ, ಇನ್ನಿತರ ಖಾಯಿಲೆಗಳಿಂದ ಕೈ ಮತ್ತು ಕಾಲು ಕಳೆದುಕೊಂಡವರಿಗೆ ಕೃತಕವಾಗಿ ಕೈ ಮತ್ತು ಕಾಲುಗಳ ಅಳತೆ ಪಡೆದು ಸೂಕ್ತ ಉಪಕರಣವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿಬಿರದ ಹೊರತಾಗಿ 50 ಜನರಿಗೆ ಕೃತಕ ಕೈ ಮತ್ತು ಕಾಲು ಜೋಡಣೆ ಮಾಡಲಾಗಿದೆ. ಇದೀಗ ಆಯೋಜಿಸಲಾಗಿರುವ ಶಿಬಿರಕ್ಕೆ 230 ಜನರು ನೋಂದಾಯಿಸಿಕೊಂದ್ದಾರೆ. ಶಿಬಿರ ನಡೆಯುವ ವೇಳೆಯೂ ನೋಂದಣಿಗೆ ಅವಕಾಶವಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು. ಜು.21ರಂದು ಶಿಬಿರಾರ್ಥಿಗಳಿಗೆ ಉಪಕರಣಗಳ ವಿತರಣೆ ಮಾಡಲಾಗುವುದು. ಕಳೆದ ಬಾರಿ ಶಿಬಿರದಲ್ಲಿ 270 ಜನರಿಗೆ ಕೃತಕ ಕೈ, ಕಾಲು ಜೋಡಣೆ ಮಾಡಲಾಗಿತ್ತು ಎಂದು ವಿವರಿಸಿದರು.

ಸಂಸ್ಥೆಯ ಗೇಬ್ರಿಯೆಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net