

ಬನ್ನಿಕುಪ್ಪೆ: ದರ್ತಿ ಆಬಾ ಜನ ಜಾತಿಯ ಗ್ರಾಮ ಉತ್ಕರ್ಷ ಕಾರ್ಯಕ್ರಮ ಅಂಗವಾಗಿ ಕೇಂದ್ರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮರಳಯ್ಯನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಆದಿ ಕರ್ಮಯೋಗಿ ಅಭಿಯಾನ ಆಯೋಜಿಸಲಾಗಿತ್ತು.
ಕೇಂದ್ರದಿಂದ ಸಿಗುವ ವಸತಿ, ರಸ್ತೆ, ಚರಂಡಿ, ಕುಡಿಯುವ ನೀರು, ಅಂಗನವಾಡಿ ಕಟ್ಟಡ, ವೈದ್ಯಕೀಯ ಸೇವೆ, ಸ್ಮಶಾನ್ಯ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಧಾರ್ಮಿಕ ಸ್ಥಳಗಳ ಅಭಿವೃದ್ಧಿ, ಅಂಚೆ ಕಚೇರಿ, ದೂರವಾಣಿ ಸಂಪರ್ಕ, ಅನಿಲ ಸಂಪರ್ಕ, ತರಕಾರಿಗಳ ದಾಸ್ತಾನು ಮಳಿಗೆ, ಸಿಸಿ ರಸ್ತೆಗಳು, ಡಾಂಬರೀಕರಣ, ಪ್ರೌಢಶಾಲೆ ನಿರ್ಮಾಣ, ಕೃಷಿ ಯಂತ್ರೋಪಕರಣಗಳ ಕುರಿತು ಬುಡಕಟ್ಟು ಕಲ್ಯಾಣ ಇಲಾಖೆ ಅಧಿಕಾರಿ ಚೇತನ್ ಕುಮಾರ್ ಹಾಗೂ ರಾಜೇಶ್ವರಿ ಸಭೆಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿ ಜನರಿಗೆ ಅರಿವು ಮೂಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಗೋವಿಂದನಾಯಕ್, ಸದಸ್ಯ ಎಂ.ಸಿ.ಚಂದ್ರಶೇಖರ್, ಪಿಡಿಒ ರಾಘವೇಂದ್ರ ಪ್ರಸನ್ನ, ಕಾರ್ಯದರ್ಶಿ ಸಿ.ಎಸ್.ವೇದಮೂರ್ತಿ, ಆರೋಗ್ಯ ಇಲಾಖೆಯ ನಾಗರಾಜ್, ರಾಣಿ, ಮುಖಂಡರಾದ ಪುಟ್ಟನಾಯಕ, ಸಣ್ಣಪ್ಪನಾಯಕ, ಮಾದೇಗೌಡ, ಯೋಗೇಶ್, ಪುಟ್ಟರಾಜು ಇತರರಿದ್ದರು.