ಆದಿಜಾಂಬವ ಜಯಂತ್ಯುತ್ಸವ

02arsph1ep
Published on

ಅರಸೀಕೆರೆ : ರಾಜ್ಯ ಮಾದಿಗ ದಂಡೋರ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ವತಿಯಿಂದ ನಗರದ ಜೇನುಕಲ್ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಸಿಂಧು ಭವನದಲ್ಲಿ ಇತ್ತೀಚೆಗೆ ಆದಿಜಾಂಬವ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು.
ಸಂಘಟನೆಯ ಅಧ್ಯಕ್ಷ ಎಂ.ಶಂಕರಪ್ಪ ಮಾತನಾಡಿ, ರಾಮಾಯಣ ಮಹಾಕಾವ್ಯದಲ್ಲಿ ಶ್ರೀರಾಮನಿಗೂ ಆದಿಜಾಂಬವನಿಗೂ ಅವಿನಾಭಾವ ಸಂಬಂಧವಿದೆ ಎನ್ನುವುದು ಜನಜನಿತವಾಗಿದೆ. ರಾಮ, ರಾವಣರ ಯುದ್ಧದಲ್ಲಿ ಲಕ್ಷ್ಮಣ ಆಪತ್ತಿಗೆ ಸಿಲುಕಿದಾಗ ಸಂಜೀವಿನಿ ಪರ್ವತ ಹೊತ್ತು ತಂದ ಆಂಜನೇಯನಿಗೆ ಮಹತ್ವ ಸಂದೇಶ ನೀಡಿದವನು ಆದಿಜಾಂಬವ ಎನ್ನುವುದನ್ನು ಎಂದಿಗೂ ಮರೆಯಲಾಗದು. ಕುರಿ, ಕೋಳಿ ಸೇರಿದಂತೆ ಪ್ರಾಣಿ ಬಲಿ ಪಡೆಯವ ದೇವಾನು ದೇವತೆಗಳಿಗೆ ಭವ್ಯ ದೇಗುಲ ಕಟ್ಟಲಾಗಿದೆ. ಆದರೆ ಆದಿಜಾಂಬವನಿಗೆ ದೇವಸ್ಥಾನ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದರು.ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು. ಸಮುದಾಯದ ಮುಖಂಡರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ರ‌್ಯಾಲಿ ನಡೆಸಿ ಗಮನಸೆಳೆದರು. ಆದಿಜಾಂಬವ ನೌಕರರ ಸಂಘದ ಗೌರವಾಧ್ಯಕ್ಷ ಶೇಖರಪ್ಪ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net