ಪ್ರವಚನ ಆಲಿಕೆಯಿಂದ ಜೀವನ ಪರಿವರ್ತನೆ

05-01kodekal01
ಕೊಡೇಕಲ್‌ನಲ್ಲಿ ಶ್ರೀ ಬಸವರಾಜಯ್ಯ ಅಪ್ಪ ಅವರ ೬೯ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಆಧ್ಯಾತ್ಮಿಕ ಜೀವನ ದರ್ಶನ ಪ್ರವಚನಕ್ಕೆ ಚಾಲನೆ ನೀಡಲಾಯಿತು. ಶ್ರೀ ವೃಷಭೇಂದ್ರ ಅಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಜಯಸಿz್ದೆÃಶ್ವರ ಶಿವಾಚಾರ್ಯ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ್ ಇದ್ದರು.
Published on

ಕೊಡೇಕಲ್: ಪ್ರವಚನ ಆಲಿಸುವುದರಿಂದ ನಮ್ಮಲ್ಲಿರುವ ತಪ್ಪು ಸರಿಪಡಿಸಿಕೊಂಡು ಜೀವನ ಪರಿವರ್ತನೆಗೆ ಸಹಕಾರಿಯಾಗಲಿದೆ ಎಂದು ಕೊಡೇಕಲ್ ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ನುಡಿದರು.

ಬಯಲೋಳು ಬಯಲಾಗಿರುವ ಬಸವ ಪೀಠಾಧಿಪತಿ ಶ್ರೀ ಬಸವರಾಜಯ್ಯ ಅಪ್ಪ ಅವರ ೬೯ನೇ ಪುಣ್ಯಾರಾಧನೆ ನಿಮಿತ್ತ ನಿಜಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರದಿಂದ ಆರಂಭವಾದ ಆಧ್ಯಾತ್ಮಿಕ ಜೀವನ ದರ್ಶನ ಪ್ರವಚನ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಿ, ಪ್ರೇಮ ಸಕಲ ಪ್ರಾಣಿ ಪಕ್ಷಿಗಳಿಗೂ ಬೇಕು. ಪ್ರೇಮದಿಂದ ಬದುಕುವವರ ಬಾಳು ಸದಾ ಹಸಿರಾಗಿರುತ್ತದೆ. ಬದುಕಿನಲ್ಲಿ ನಿಸ್ವಾರ್ಥ ಮನೋಭಾವ ಅಳವಡಿಸಿಕೊಂಡರೆ ಪರಮಾತ್ಮ ದರ್ಶನ ನೀಡುತ್ತಾನೆ ಎಂದು ಹೇಳಿದರು.

ಹಿರೂರಿನ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಜಯಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಜೀವನದಲ್ಲಿ ಬರುವ ಸುಖ-ದುಃಖವನ್ನು ಸಮಾನವಾಗಿ ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು. ಮಹಾತ್ಮರು ಸದಾ ಸಂತುಷ್ಟರಾಗಿರುವುದಕ್ಕೆ ಅವರ ಆಧ್ಯಾತ್ಮಿಕ ಬದುಕೇ ಮೂಲಕ ಕಾರಣವಾಗಿದೆ ಎಂದರು.

ಶ್ರೀ ಗುರು ದುರದಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರಾಜಾ ವೆಂಕಟಪ್ಪನಾಯಕ ಜಹಾಗೀರದಾರ್ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಭದ್ರಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಾಥ ದೋರಿ, ನೇಕಾರ ಸಮಾಜ ಒಕ್ಕೂಟಗಳ ಜಿಲ್ಲಾಧ್ಯಕ್ಷ ವೀರಸಂಗಪ್ಪ ಹಾವೇರಿ, ಎಸ್.ಎಸ್.ಜೋಶಿ, ಸೋಮಲಿಂಗಪ್ಪ ದೋರಿ, ದೇವು ಗೋಪಾಳಿ, ಮೋಹನ ಪಾಟೀಲ್, ವೀರಸಂಗಪ್ಪ ಅಂಬ್ಲಿಹಾಳ, ಬಸಯ್ಯ ಹಳೇ ಪೂಜಾರಿ, ಗುರುಬಸ್ಸು ಪಂಜಗಲ್, ಪ್ರಭು ನೀಲಗಾರ, ರಮೇಶ ಬಿರಾದಾರ, ಮಲ್ಲು ಜಂಗಳಿ ಇತರರಿದ್ದರು.

ಶಾಮಸುಂದರ ಜೋಶಿ ಸ್ವಾಗತಿಸಿದರು. ಬಸವರಾಜ ಪಂಜಗಲ್ ವಂದಿಸಿದರು, ಕೋರಿ ಸಂಗಯ್ಯ ಗಡ್ಡದ ನಿರೂಪಣೆ ಮಾಡಿದರು. ನಾಗರಾಜ ಹೂಗಾರ ಮತ್ತು ಸುರೇಶ ಹೂಗಾರ ತಂಡ ಸಂಗೀತ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net