ಅಧಿವೇಶನಕ್ಕೆ ಕೋಲಾಹಲದ ತೆರೆ- ಪ್ರತಿಪಕ್ಷ ಧರಣಿ: ಎನ್​ಇಪಿ ಚರ್ಚೆಗೆ ಅವಧಿ ವಿಸ್ತರಿಸಲು ಪಟ್ಟು

anathavaidaya tere
Published on

ಬೆಂಗಳೂರು: ಅಧಿವೇಶನದ ಅವಧಿ ವಿಸ್ತರಿಸಲು ಪ್ರತಿಪಕ್ಷ ಕಾಂಗ್ರೆಸ್​ ಪಟ್ಟು ಹಿಡಿದು ಧರಣಿ, ಪರ&ವಿರೋಧದ ಘೋಷಣೆಗಳ ಮೊಳಗು, ಕೋಲಾಹಲದ ಮಧ್ಯೆ ವಿಧಾನಸಭೆ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ತೆರೆಬಿತ್ತು.

ಕಳೆದ ಒಂಬತ್ತು ದಿನಗಳಿಂದ ಕೆಲವೊಮ್ಮೆ ಮಾತಿನ ಚಕಮಕಿ, ಒಂದು ಬಾರಿ ಸಭಾತ್ಯಾಗದ ಮಧ್ಯೆ ವಿಸತ, ಗಂಭೀರ ಚರ್ಚೆ, ಅದಕ್ಕೆ ತಕ್ಕಂತೆ ಉತ್ತರ, ಸಕ್ರಿಯ ಪಾಲ್ಗೊಳ್ಳುವಿಕೆಗೆ ಸದನ ಸಾಯಾಗಿತ್ತು. ಇದರಿಂದಾಗಿ ಧಾಮಿರ್ಕ ಕಟ್ಟಡಗಳ ಸಂರಕ್ಷಣೆ ಸೇರಿ 17 ವಿಧೇಯಕಗಳು ಮಂಡನೆಯಾಗಿದ್ದು, ಬಾಕಿ ಉಳಿದವು ಒಳಗೊಂಡು 19 ಮಸೂದೆಗಳು ಅಂಗೀಕಾರವಾಗಿವೆ.

ಆದರೆ 10ನೇ ಹಾಗೂ ಅಂತಿಮ ದಿನದ ಕಲಾಪ ಕೊನೆಯ ಟ್ಟದಲ್ಲಿದ್ದಾಗ ನಾಟಕೀಯ ತಿರುವು ಪಡೆಯಿತು. ಕಲಾಪದಲ್ಲಿ ಮಸೂದೆಗಳ ಅಂಗೀಕಾರ ಸೇರಿ ವಿವಿಧ ಪ್ರಕ್ರಿಯೆಯನ್ನು ಸರ್ಕಾರ ಪೂರೈಸಿದ್ದು, ಜನ ಸಾಮಾನ್ಯರ ಸಮಸ್ಯೆಗಳ ಚರ್ಚೆಗೆ ಅಧಿವೇಶನದ ಅವಧಿ ಒಂದು ವಾರ ವಿಸ್ತರಿಸಲು ಒತ್ತಾಯಿಸಿದರು. ಸ್ಪೀಕರ್​ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬೇಡಿಕೆಗೆ ಸ್ಪಂದಿಸಲಿಲ್ಲವೆಂದು ಕಾಂಗ್ರೆಸ್​ ಸದಸ್ಯರು ಸ್ಪೀಕರ್​ ಪೀಠದ ಮುಂದೆ ಧಾವಿಸಿ ಧರಣಿ ಹೂಡಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರವಾಹ&ಮಳೆ ಹಾನಿ, ಸಕ್ಕರೆ ಕಾರ್ಖಾನೆಗಳು, ಕಾಡುಗೊಲ್ಲ, ಎಸ್ಟಿ ಮೀಸಲು ಇನ್ನಿತರ ಸಮಸ್ಯೆಗಳ ಚರ್ಚೆಗೆ ಅಧಿವೇಶನ ವಿಸ್ತರಿಸಲೇಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು.

ಕೋಲಾಹಲದ ತಿರುವು

ಮಾತಿನ ಮಧ್ಯೆ ಸಿದ್ದರಾಮಯ್ಯ ಅವರು ನಾಗ್ಪುರ ಶಿಕ್ಷಣ ನೀತಿ ಎಂದು ಕುಟುಕಿದರೆ, ರೋಮ್​ ಅಥವಾ ಇಟಲಿ ನೀತಿ ಅಲ್ಲವಲ್ಲವೆಂದು ಬಿಜೆಪಿಯ ಸಿ.ಟಿ.ರವಿ ತಿರುಗೇಟು ನೀಡಿದರು. ಡಿ.ಕೆ.ಶಿವಕುಮಾರ್​ ಕೂಡ ನಾಗ್ಪುರ ಶಿಕ್ಷಣ ನೀತಿ ಎಂದು ಪುನರುಚ್ಚರಿಸಿದರೆ, ಸಿದ್ದರಾಮಯ್ಯ ಆರ್​ಎಸ್​ಎಸ್​ ಹೆಸರೆತ್ತಿದರು. ನಾವದರ ಬದ್ಧ ವಿರೋಧಿಗಳು, ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಏರುಧ್ವನಿಯಲ್ಲಿ ಹೇಳಿದ್ದೇ ತಡ ಕೋಲಾಹಲದ ತಿರುವು ಪಡೆಯಿತು.

ಬಾಕಿಯಿರುವ ಕೆಲವು ವಿಷಯಗಳ ಚರ್ಚೆಗೆ ಅವಕಾಶ ಕೊಡಿ ಸ್ಪೀಕರ್​ ಕೋರಿದರೆ, ನಿಮ್ಮ ಪೂರ್ವಾಶ್ರಮ ಆರ್​ಎಸ್​ಎಸ್​ ಅಲ್ಲವೇ? ಎಂದು ಸಿದ್ದರಾಮಯ್ಯ ಕೇಳಿದರು. ಹೌದು, ಈಗಲೂ ಅದೇ ಆಶ್ರಮ ಎನ್ನುವುದಕ್ಕೆ ಹೆಮ್ಮೆಯಿದೆ. ಅದೇ ರಾಷ್ಟ್ರೀಯತೆ. ಆರ್​ಎಸ್​ಎಸ್​ ಶಿಕ್ಷಣ ನೀತಿ ಎನ್ನುವುದು ಒಳ್ಳೆಯದೇ ಆಯಿತು ಎಂಬ ಮಾತನ್ನೂ ಸ್ಪೀಕರ್​ ಸೇರಿಸಿದರು.

ಈ ಬಾರಿ ಅಧಿವೇಶನದಲ್ಲಿ ಸರ್ಕಾರದ ನಿಲುವು, ನೀಡಿದ ಉತ್ತರ ಸರಿ ಎನಿಸದಿದ್ದರೆ ಸಭಾತ್ಯಾಗ ಮಾಡಬೇಕೇ ಹೊರತು, ಧರಣಿ, ಪ್ರತಿಭಟನೆ, ಗದ್ದಲ ಮಾಡಬಾರದು ಎಂಬ ತನ್ನದೇ ನಿರ್ಧಾರವನ್ನು ಕಾಂಗ್ರೆಸ್​ ಕೊನೆಯ ದಿನ ಮುರಿಯಿತು.

ಪರಸ್ಪರ ಘೋಷಣೆಗಳ ಮೊಳಗು

ಸ್ಪೀಕರ್​ ಪೀಠದ ಎದುರು ಪ್ರತಿಭಟನಾನಿರತರ ಜತೆಗೆ ಸಿದ್ದರಾಮಯ್ಯ ಸೇರಿ ಪಕ್ಷದ ಎಲ್ಲ ಹಿರಿಯ ನಾಯಕರು ಧಾವಿಸಿದರು. ಹಿಂದುಳಿದವರ, ದೀನ&ದಲಿತರ, ಅಲ್ಪಸಂಖ್ಯಾತರ ವಿರೋಧಿ ಶಿಕ್ಷಣ ನೀತಿ ಕೈಬಿಡಿ, ಕುಣಿಗಲ್​ ಲಿಂಕ್​ ಕೆನಾಲ್​ ಚರ್ಚೆಗೆ ಅವಕಾಶ ಕೊಡಿ ಎಂಬುದು ಸೇರಿ ಹಲವು ಮುದ್ರಿತ ಭಿತ್ತಿಪತ್ರಗಳನ್ನು ಪ್ರದಶಿರ್ಸಿದರು. ನಾಗ್ಪುರ ಶಿಕ್ಷಣ ನೀತಿ, ಆರ್​ಎಸ್​ಎಸ್​ ಕೈಗೊಂಬೆ, ಚೌಕಿದಾರ್​ ಚೋರ್​ ಹೈ ಎಂದು ಕಾಂಗ್ರೆಸ್​ ಘೋಷಣೆ ಮೊಳಗಿಸಿದರೆ, ಗಲಿ ಗಲಿ ಮೇ ಶೇರ್​ ಹೈ ಕಾಂಗ್ರೆಸ್​ ವಾಲಾ ಚೋರ್​ ಹೈ, ಇಟಲಿ ಕೈಗೊಂಬೆ ಎಂಬ ಘೋಷಣೆಯನ್ನು ಬಿಜೆಪಿ ಸದಸ್ಯರು ಮೊಳಗಿಸಿದರು. ಇಬ್ಬಣಗಳು ಪೈಪೋಟಿಯ ಮೇಲೆ ಘೋಷಣೆಗಳ ಸದ್ದಿನಿಂದಾಗಿ ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳಿಸಿದಾಯಿತು. ಜೆಡಿಎಸ್​ ಸದಸ್ಯರು ಮಾತ್ರ ಮೂಕಪ್ರೇಕ್ಷಕರಾಗಿ ಕುಳಿತಿದ್ದರು.

ಉತ್ತರ, ವರದಿ ಮಂಡನೆ

ಗದ್ದಲ ನಡುವೆಯೂ ಕರೊನಾ ವಿಷಯದ ಮೇಲೆ ಕಾಂಗ್ರೆಸ್​ ನಡೆಸಿದ್ದ ಸುದೀರ್ ಚರ್ಚೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಉತ್ತರಿಸಿ, ಕರೊನಾ ಮೊದಲ, ಎರಡನೇ ಅಲೆ ಸಮರ್ಥವಾಗಿ ನಿಭಾಯಿಸಿದ್ದು, ಮೂರನೇ ಅಲೆಗೂ ನಿರ್ವಹಣೆಗೆ ತಯಾರಿ ನಡೆದಿದೆ ಎಂದರು. ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸುವಾಗ ಕಾಂಗ್ರೆಸ್​ ರಾಜಕೀಯ ಮಾಡುತ್ತಿದ್ದು, ಜನರ ಬಗ್ಗೆ ಇವರಿಗೆ ಇರುವ ಕಾಳಜಿ, ಬದ್ಧತೆ ಎಷ್ಟೆಂಬುದು ತೋರಿಸಿಕೊಡುತ್ತದೆ ಎಂದು ಸುಧಾಕರ್​ ಛೇಡಿಸಿದರು. ಕೋಲಾಹಲದ ವಾತಾವರಣ, ಘೋಷಣೆಗಳತ್ತ ಕಿವಿಗೊಡದ ಸ್ಪೀಕರ್​, ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ, ಸ್ಥಳಿಯ ಸಂಸ್ಥೆಗಳ ಮತ್ತು ಪಂಚಾಯತ್​ ರಾಜ್​ ಸಂಸ್ಥೆಗಳ ಸಮಿತಿ ವರದಿಗಳನ್ನು ಸದನದಲ್ಲಿ ಮಂಡಿಸಲು ಅವಕಾಶ ಕಲ್ಪಿಸಿದರು. ಅಲ್ಲದೆ, ವಿಧಾನಸಭೆ ಮುಂಗಾರು ಅಧಿವೇಶನದ 10 ದಿನಗಳ ಕಾರ್ಯಕಲಾಪದ ವರದಿಯನ್ನು ಸದನಕ್ಕೆ ಒಪ್ಪಿಸಿ, ಅನಿದಿರ್ಷ್ಟಾವಧಿಗೆ ಮುಂದೂಡಿದರು.

ಆರ್​ಎಸ್​ಎಸ್​ ಶಿಕ್ಷಣ ನೀತಿಯೆಂದರೂ ಚಿಂತಿಸುವುದಿಲ್ಲ

ಕಾಂಗ್ರೆಸ್​ಗೆ ಬೇಕಿರುವುದು ವಿದೇಶಿ ನೀತಿ, ಗುಲಾಮಗಿರಿ ನೀತಿಯಾಗಿದೆ. ಆದರೆ ನೂತನ ಶಿಕ್ಷಣ ನೀತಿಯು ಭಾರತೀಯರ ಭವಿಷ್ಯ, ಭಾರತೀಯತೆಗೋಸ್ಕರ, ದೇಶದ ಅಸ್ಮಿತೆ ಎತ್ತಿ ಹಿಡಿಯುವುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೋರು ಧ್ವನಿಯಲ್ಲಿ ಪ್ರತ್ಯುತ್ತರಿಸಿದರು. ಆರ್​ಎಸ್​ಎಸ್​ ಶಿಕ್ಷಣ ನೀತಿ ಎಂದೇ ಕರೆಯಿರಿ ಚಿಂತೆ ಮಾಡುವುದಿಲ್ಲ. ಆದರೆ ಮೇಧಾವಿ ಕಸ್ತೂರಿ ರಂಗನ್​ ನೇತೃತ್ವದ ಸಮಿತಿ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿ ರೂಪಿಸಿದ ವರದಿಯಿದು ಎಂಬುದನ್ನು ಮರೆಯಬಾರದು ಎಂದು  ಸಲಹೆ ನೀಡಿದರು. ಗ್ರಾಮೀಣ ಪ್ರದೇಶದ ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವುದು, ಕೌಶಲ ಮತ್ತು ಉದ್ಯೋಗದ ಅವಕಾಶಗಳನ್ನು ಶೋಷಿತರು, ಹಿಂದುಳಿದವರು, ನೊಂದವರಿಗೆ ಕಲ್ಪಿಸಿ ಕೊಡುವ ನೀತಿಯಾಗಿದ್ದು, ಕಾಂಗ್ರೆಸ್​ಗೆ ಗುಲಾಮಗಿರಿ ಬಿಟ್ಟು ಬೇರೇನೂ ಬೇಕಾಗಿಲ್ಲವೆಂದು ಬೊಮ್ಮಾಯಿ ಹಂಗಿಸಿದರು.

ತಡರಾತ್ರಿ ತನಕ ನಡೆದ ಮೇಲ್ಮನೆ ಕಲಾಪ

ವಿಧಾನಪರಿಷತ್​ ಅಧಿವೇಶನ ಗುರುವಾರ ತಡರಾತ್ರಿ 12.35ರ ತನಕ ನಡೆದು ಹೊಸ ದಾಖಲೆ ಸೃಷ್ಟಿಸಿತು. ಶುಕ್ರವಾರ ಅರ್ಧ ದಿನಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ಬಿಲ್​ಗಳ ಮೇಲಿನ ಚರ್ಚೆ, ಗಮನ ಸೆಳೆಯುವ ಸೂಚನೆಗಳ ಮೇಲಿನ ಚರ್ಚೆಗಳು ಸುಧೀರ್ ಅವಧಿ ತನಕ ನಡೆದವು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆಯೂ ಎರಡೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಸಿಎಂ ಬೊಮ್ಮಾಯಿ ಭಾಗವಹಿಸಿ ಗಮನ ಸೆಳೆದರು. ಕರ್ನಾಟಕ ಪೊಲೀಸ್​ ತಿದ್ದುಪಡಿ ವಿಧೇಯಕ ಬಗ್ಗೆಯೂ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದ್ದು ಅಲ್ಲದೆ, ಬೆಂಗಳೂರು ರ್ಟ ಕ್ಲಬ್​ ಸ್ಥಳಾಂತರ ಬಗ್ಗೆಯೂ ಒಕ್ಕೊರಲ ಆಗ್ರಹಗಳು ಕೇಳಿಬಂದವು. ್ಯಾಂಟಸಿ ಗೇಮ್​ ಬಗ್ಗೆಯೂ ಸವಿವಿಸ್ತಾರವಾದ ಚರ್ಚೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net