

ಬೆಂಗಳೂರು: ಹದಿನೈದನೇ ವಿಧಾನಸಭೆಯ 12ನೇ ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದು, ಸಂವಿಧಾನದ ಅನುಚ್ಛೇದ 174(1)ದಲ್ಲಿ ಪ್ರದತ್ತವಾದ ಅಧಿಕಾರ ಉಪಯೋಗಿಸಿ ರಾಜ್ಯಪಾಲರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕಳೆದ ಒಂದು ವರ್ಷದಲ್ಲಿನ ಸರ್ಕಾರದ ಕಾರ್ಯಕ್ರಮಗಳು, ಅದರ ಪರಿಣಾಮ, ಅನುಷ್ಠಾನದ ಬಗ್ಗೆ ವಿವರಿಸುವ ಜತೆಗೆ, ಸರ್ಕಾರ ಈ ಅವಧಿಯಲ್ಲಿ ಕೈಗೊಂಡ ನೀತಿ, ನಿಲುವುಗಳನ್ನು ಪ್ರಸ್ತಾಪಿಸಲಿದ್ದಾರೆ. ಈ ಭಾಷಣದ ಆಧಾರದಲ್ಲೇ ಮುಂದಿನ ಒಂಬತ್ತು ದಿನ ಚರ್ಚೆ ನಡೆಯಲಿದೆ.
ಸರ್ಕಾರವನ್ನು ಹಣಿಯಲು ಪ್ರತಿಪ ಕಾಂಗ್ರೆಸ್ಗೆ ಅಷ್ಟೇನು ಪ್ರಮುಖ ಅಸ್ತ್ರ ಇದ್ದಂತೆ ಕಾಣಿಸುತ್ತಿಲ್ಲ. ಆದರೂ ಸಿಕ್ಕ ಅವಕಾಶ ಬಳಸಿಕೊಂಡು ಇಕ್ಕಟ್ಟಿಗೆ ಸಿಲುಕಿಸಲು ರಾಜಕೀಯ ಸಹಜ ತಂತ್ರ ಬಳಸಲಿದೆ. ಯಾವ ವಿಷಯವನ್ನು ಆದ್ಯತೆ ಮೇಲೆ ಕೈಗೊಳ್ಳಬೇಕೆಂದು ಶಾಸಕಾಂಗ ಪದ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಪಕ್ಷಗಳ ಅಸ್ತ್ರ
*ಕೇಂದ್ರದ ಅನುದಾನ ಖೋತಾ
*ಜಿಎಸ್ಟಿ ನೆರವು ಕಡಿತ
*ಶೇ.40 ಕಮೀಷನ್ ಆರೋಪ
*ನೀರಾವರಿ ಯೋಜನೆಗಳಿಗೆ ಸಿಗದ ಅನುಮತಿ
*ಕಾನೂನು ಸುವ್ಯವಸ್ಥೆ, ಕರೊನಾ ಮಾರ್ಗಸೂಚಿ, ಆಡಳಿತ ಪದಿಂದಾದ ಉಲ್ಲಂನೆ
*ಸುಪ್ರೀಂಕೋರ್ಟ್ ತೀಪಿರ್ನಿಂದಾಗಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲು ಅವಕಾಶ ಸಿಗದಿರುವುದು
19 ಹೊಸ ಸದಸ್ಯರು
ವಿಧಾನಸಭೆಯಿಂದ ವಿಧಾನಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 19 ಮಂದಿ ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ. ಅವರಿಗೆ ಇದು ಮೊದಲ ಅಧಿವೇಶನವಾಗಿರಲಿದೆ. ಅವರೆಲ್ಲರಿಗೂ ಸದನದ ನಿಯಮದ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಪ್ರಸ್ತುತ ಪರಿಷತ್ನಲ್ಲಿ ಬಿಜೆಪಿ 37 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 26, ಜೆಡಿಎಸ್ 10, ಒಬ್ಬ ಪೇತರ ಸೇರಿದಂತೆ ಸಭಾಪತಿ ಇದ್ದಾರೆ. 75 ಸದಸ್ಯ ಬಲದ ಪರಿಷತ್ನಲ್ಲಿ ಬಹುಮತಕ್ಕೆ ಬಿಜೆಪಿಗೆ ಒಂದು ಸ್ಥಾನದ ಕೊರತೆ ಬೀಳಲಿದೆ.
ಮತಾಂತರ ನಿಷೇಧ ಮಸೂದೆಗೆ ಒಪ್ಪಿಗೆ?
ವಿಧಾನಸಭೆಯಿಂದ ಒಪ್ಪಿಗೆ ಪಡೆದ ರೂಪದಲ್ಲಿರುವ ಮತಾಂತರ ನಿಷೇಧ ಮಸೂದೆ ಪರಿಷತ್ನಲ್ಲಿ ಚರ್ಚೆಗೆ ಬರಲಿದೆ. 2021ರ ಡಿಸೆಂಬರ್ನಲ್ಲಿ ನಡೆದ ಬೆಳಗಾವಿ ಅಧಿವೇಶನದ ಕೊನೇ ದಿನ (ಡಿ.24)ರಂದು ವಿಧೇಯಕಕ್ಕೆ ಒಪ್ಪಿಗೆ ಪಡೆಯಬೇಕೆಂಬ ಆಡಳಿತ ಪದ ಪ್ರಯತ್ನಕ್ಕೆ ಸಹಕಾರ ಸಿಕ್ಕಿರಲಿಲ್ಲ. ಜತೆಗೆ ಆಡಳಿತ ಪಕ್ಕೆ ಬಹುಮತ ಇರಲಿಲ್ಲ. ಈಗ ಬಹುಮತಕ್ಕೆ ಆಡಳಿತ ಪಕ್ಕೆ 1 ಮತದ ಕೊರತೆ ಬೀಳಲಿದೆ. ಪೇತರರಾಗಿ ಗೆಲುವು ಸಾಧಿಸಿದ ಲಖನ್ ಜಾರಕಿಹೊಳಿ ರಾಜಕೀಯ ನಿಲುವು ಏನೆಂಬುದು ಈ ಮಸೂದೆ ಪರ್ಯಾಲೋಚನೆ ವೇಳೆ ಸ್ಪಷ್ಟವಾಗಲಿದೆ.
ಹಿಜಾಬ್ ಚರ್ಚೆಗೆ ಅಳುಕು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಹಿಜಾಬ್ ಪ್ರಕರಣ ಹಾಗೂ ಅದರ ಸುತ್ತ ನಡೆದ ಬೆಳವಣಿಗೆ ಬಗ್ಗೆ ವಿಧಾನ ಮಂಡಲದಲ್ಲಿ ಚರ್ಚೆ ನಡೆಸುವ ಕುರಿತು ಆಡಳಿತ ಹಾಗೂ ಪ್ರತಿಪದಲ್ಲಿ ಸ್ಪಷ್ಟತೆ ಕಾಣಿಸಿಲ್ಲ. ಚರ್ಚೆಯಾಗಬೇಕೆಂದು ವಾದಿಸುವವರು ಎರಡೂ ಪದಲ್ಲಿದ್ದಾರೆ. ಚರ್ಚೆಯಾದರೆ ವಾತಾವರಣ ಇನ್ನಷ್ಟು ಕಲುಷಿತವಾಗುತ್ತದೆ, ಹೀಗಾಗಿ ಚರ್ಚೆ ಕೂಡದು ಎಂಬ ಅಭಿಪ್ರಾಯ ಹೊಂದಿದವರೂ ಇದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಿ ಅಧಿವೇಶನದಲ್ಲಿ ಚರ್ಚೆ ನಡೆಸುವುದು ಸೂಕ್ತವಲ್ಲ ಎಂಬ ನಿಲುವು ಸರ್ಕಾರದ್ದಾಗಿದೆ. ಹಿಜಾಬ್ ಗದ್ದಲದ ಹಿಂದಿನ ಕಾಣದ ಕೈಗಳ ಬಗ್ಗೆ ಜನತೆಗೆ ಗೊತ್ತಾಗಬೇಕೆಂದು ಬಯಸುವ ಆಡಳಿತ ಪದ ಸದಸ್ಯರೂ ಇದ್ದಾರೆ, ವಿಷಯ ಇಷ್ಟಕ್ಕೆ ಮುಕ್ತಾಯವಾಗಲಿ ಎಂದು ಆಶಯ ಹೊಂದಿದವರೂ ಇದ್ದಾರೆ.
ಅಕ್ರಮ ಸಕ್ರಮ ಶಾಸಕರ ಹೆಗಲಿಗೆ
ಕೆಪಿಎಸ್ಸಿ 2011ರಲ್ಲಿ ಪತ್ರಾಂಕಿತ ಹುದ್ದೆಗೆ ನಡೆದ ಪರೀೆಯಲ್ಲಿ ಅರ್ಹತೆ ಗಳಿಸಿದವರ ಪಟ್ಟಿಯನ್ನು ಒಪ್ಪುವ ವಿಚಾರದಲ್ಲಿ ಸರ್ಕಾರ ವಿಧಾನ ಮಂಡಲದಲ್ಲಿ ಪ್ರಸ್ತಾವನೆ ಮಂಡಿಸಿ ಚರ್ಚೆಗೆ ಬಿಡಲಿದೆ. ಸರ್ಕಾರಿ ಸಂಸ್ಥೆಯೇ ಪರೀೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿ ನೀಡಿತ್ತು. ಕೋರ್ಟ್ ಈ ಪಟ್ಟಿ ಒಪ್ಪಿರಲಿಲ್ಲ. ಇಷ್ಟಾದ ಮೇಲೆ ಕೆಪಿಎಸ್ಸಿ ಪಟ್ಟಿಯನ್ನು ಒಪ್ಪಿ ಶಾಸನ ಸಭೆ ಗಮನಕ್ಕೆ ತರುತ್ತಿದೆ. ಆಡಳಿತ ಮತ್ತು ಪ್ರತಿಪ ಶಾಸಕರೆಲ್ಲರ ಅಭಿಪ್ರಾಯದಂತೆ ನಡೆಸಲು ಬಯಸಿದೆ. ಹಿರಿಯ ಅಧಿಕಾರಿಗಳು ಈ ಪಟ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿವಾದಿತ ಪಟ್ಟಿಯಲ್ಲಿರುವ 362 ಮಂದಿಯ ಭವಿಷ್ಯ ಶಾಸಕರ ಕೈಯಲ್ಲಿದ್ದು, ಈ ಅಧಿವೇಶನದಲ್ಲೇ ನಿರ್ಧಾರವಾಗಲಿದೆ.
ಕಲಾಪದ ವೇಳಾಪಟ್ಟಿ
ಫೆ. 14- ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಭಾಷಣ, ಫೆ. 15ರಿಂದ 25ರವರೆಗೆ ಅಧಿವೇಶನವಿದ್ದು ಪ್ರಶ್ನೋತ್ತರ, ಅಲ್ಪಾವಧಿ ಚರ್ಚೆ, ಶೂನ್ಯವೇಳೆ, ನಿಲುವಳಿ ಸೂಚನೆ, ವಿಧೇಯಕ ಮಂಡನೆಯಂತಹ ಪ್ರಕ್ರಿಯೆ ನಡೆಯುವುದು. ಫೆ.19ರ ಶನಿವಾರ ಮತ್ತು ಫೆ. 20ರ ಭಾನುವಾರ ಕಲಾಪ ಇರುವುದಿಲ್ಲ.