ಹೊಸ ಮಾನದಂಡಗಳಿಗೆ ಬದ್ಧರಾಗಿ

bis hubballi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಆಭರಣ ವ್ಯಾಪಾರಿಗಳು ಹಾಲ್​ವಾರ್ಕ್​ಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳಿಗೆ ಬದ್ಧರಾಗಿ ವೃತ್ತಿ ನಿರ್ವಹಿಸಬೇಕು ಎಂದು ಭಾರತೀಯ ಮಾನಕ ಬ್ಯುರೋ (ಬಿಐಎಸ್)ದ ಹುಬ್ಬಳ್ಳಿ ಶಾಖೆ ನಿರ್ದೇಶಕ ಡಿ.ಪಿ. ಕುಮಾರ ಹೇಳಿದರು.

ಬಿಐಎಸ್ ಹುಬ್ಬಳ್ಳಿ ಶಾಖೆಯಲ್ಲಿ ಐಎಸ್-15820: 2024ಮಾನದಂಡ ಕುರಿತು ಆಯೋಸಿದ್ದ ಮಾನಕ್ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾನದಂಡವು ಆಭರಣ ತಯಾರಿಕೆ ಉದ್ಯಮದಲ್ಲಿ ಗುಣಮಟ್ಟ ಹಾಗೂ ಅನುಸರಣೆ ಕಾಯ್ದುಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.

ಹಾಲ್​ವಾರ್ಕ್ ಪ್ರಕ್ರಿಯೆಯು ಉದ್ಯಮದ ಬಗ್ಗೆ ಸಮಗ್ರತೆ ಹಾಗೂ ವಿಶ್ವಾಸಾರ್ಹತೆ ಮೂಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಈ ವೃತ್ತಿಯಲ್ಲಿ ಇರುವವರು ಗ್ರಾಹಕರ ವಿಶ್ವಾಸಕ್ಕೆ ಚ್ಯುತಿ ಆಗದಂತೆ ಆಭರಣ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.

ಉಪ ನಿರ್ದೇಶಕ ಎಂ. ಪ್ರದೀಪಕುಮಾರ ಮಾತನಾಡಿ, ಆಭರಣ ವ್ಯಾಪಾರಿಗಳ ಸಹಕಾರದೊಂದಿಗೆ ಹೊಸ ಮಾನದಂಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದು ಹೇಳಿದರು.

ಧಾರವಾಡ, ಬೆಳಗಾವಿ, ರಾಯಚೂರು, ಉತ್ತರ ಕನ್ನಡ, ಬಳ್ಳಾರಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ 40ಕ್ಕೂ ಹೆಚ್ಚು ಹಾಲ್​ವಾರ್ಕಿಂಗ್ ಕೇಂದ್ರಗಳ 40ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net