ಹೆಚ್ಚು ಪ್ರಕರಣ ಇತ್ಯರ್ಥ ಗುರಿ - ಪ್ರಿಯಾರವಿ ಜೊಗ್ಳೇಕರ್ ಹೇಳಿಕೆ - ಲೋಕ ಅದಾಲತ್ ಪೂರ್ವಭಾವಿ ಸಭೆ

PTR_4 JUL_3
Published on


ಪುತ್ತೂರು: ಜು.೧೩ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಹೆಚ್ಚಿನ ಕಾಲಾವಕಾಶ ಇಲ್ಲದ ಕಾರಣದಿಂದ ಪ್ರತಿಯೊಬ್ಬರಿಗೂ ನೋಟಿಸ್ ಜಾರಿಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಸಹಕಾರ ಅಗ್ಯವಿದೆ. ವಿಮಾ ಕಂಪನಿಗಳು ಅದಾಲತ್‌ನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಕಾರ್ಯಕ್ರಮ ೨ನೇ ಶನಿವಾರ ಎಂಬ ಕಾರಣವನ್ನು ನೀಡದೆ ಎಲ್ಲ ಅಽಕಾರಿಗಳು ಭಾಗವಹಿಸಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಿಯಾರವಿ ಜೊಗ್ಳೇಕರ್ ಹೇಳಿದರು.


ಗುರುವಾರ ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಽಕಾರ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಮಂಗಳೂರು ನಿರ್ದೇಶನದಂತೆ ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನ ಕುರಿತು ಇಲಾಖಾಽಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.


ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಚೆಕ್ ಕೇಸುಗಳು, ಬ್ಯಾಂಕ್ ಸಾಲದ ಕೇಸುಗಳು, ಜಮೀನಿಗೆ ಸಂಬಂಽಸಿದಂತೆ ವರ್ಷಾನುಗಟ್ಟಲೇ ಬಗೆಹರಿಸಿಕೊಳ್ಳದೆ ಬಾಕಿ ಇರುವ ಸಿವಿಲ್ ದಾವೆಗಳನ್ನು ಅದಾಲತ್‌ನಲ್ಲಿ ಬಗೆಹರಿಸಿಕೊಂಡಾಗ ಕಕ್ಷಿದಾರರು ಸಣ್ಣಪುಟ್ಟ ವ್ಯಾಜ್ಯಗಳಿಗಾಗಿ ಹಲವು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿದಂತಾಗುತ್ತದೆ. ಪುತ್ತೂರು ತಾಲೂಕಿನಲ್ಲಿ ಜನನ ಪ್ರಮಾಣಪತ್ರದ ಪ್ರಕರಣಗಳ ದಾಖಲೆ ಸಹಿತ ಮಾಹಿತಿಯನ್ನು ಕಂದಾಯ ಇಲಾಖೆ ನೀಡಬೇಕು. ಅವುಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಗೊಳಿಸಬೇಕು. ಇಲಾಖೆ ಶ್ರಮಪಟ್ಟರೆ ಜವಾಬ್ದಾರಿ ಕಡಿಮೆಯಾಗಿ, ಕೋರ್ಟ್‌ಗೆ ಹೋಗಿ ಕೇಸು ಹೆಚ್ಚು ಮಾಡುವುದು ಕೂಡಾ ಕಡಿಮೆ ಆಗುತ್ತದೆ ಎಂದರು.


೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಽಶೆ ಸರಿತಾ, ಹೆಚ್ಚುವರಿ ವ್ಯವಹಾರಿಕ ನ್ಯಾಯಾಽಶ ಶಿವಣ್ಣ ಎಚ್.ಆರ್, ೨ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಽಶ ಯೋಗೇಂದ್ರ ಶೆಟ್ಟಿ, ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ, ಪೌರಾಯುಕ್ತ ಮಧು ಎಸ್. ಮನೋಹರ್, ಶಿಶು ಅಭಿವೃದ್ಧಿ ಯೋಜನಾಽಕಾರಿ ಮಂಗಲಕಾಳೆ, ಸಹಾಯಕ ಸರ್ಕಾರಿ ಅಭಿಯೋಜಕಿ ಕವಿತಾ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಉಪಾಧ್ಯಕ್ಷ ಮೋನಪ್ಪ, ಕಾರ್ಯದರ್ಶಿ ಚಿನ್ಮಯ್ ರೈ, ವಕೀಲರಾದ ರಾಮಮೋಹನ್ ರಾವ್, ದೇವಾನಂದ್, ಪಿ.ಕೆ. ಸತೀಶ್, ನಾಗರಾಜ್, ಪ್ರವೀಣ್ ಕುಮಾರ್, ಗೌರಿಶಂಕರ್ ಶಾನ್‌ಬೋಗ್ ಮತ್ತಿತರರು ಉಪಸ್ಥಿತರಿದ್ದರು.


ಎನ್‌ಡಿಆರ್‌ಎಫ್ ಅನುದಾನಕ್ಕೆ ವರದಿ ಮುಖ್ಯ
ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿರುವ ಹಾನಿ, ಪ್ರಾಣಿಗಳ ಮರಣದ ಕುರಿತು ಮಾಹಿತಿ ನೀಡುವಂತೆ ಜೂ.೨೪ರಂದು ನ್ಯಾಯಾಲಯದಿಂದ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಮಾಹಿತಿ ಇಲ್ಲಿಯವರೆಗೆ ಬಂದಿಲ್ಲ. ನಾವು ಇಲ್ಲಿಂದ ಈ ಮಾಹಿತಿಯನ್ನು ಉಚ್ಛನ್ಯಾಯಾಲಯಕ್ಕೆ ನೀಡಬೇಕಾಗಿದೆ. ಈ ಮೂಲಕವೇ ಎನ್.ಡಿ.ಆರ್.ಎಫ್. ಅನುದಾನ ಬರಲಿದೆ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಿಯಾರವಿ ಜೊಗ್ಳೇಕರ್ ಹೇಳಿದರು.


ಸೂಚನೆ ಮಾಲನೆಯಾಗುತ್ತಿಲ್ಲ ಯಾಕೆ?
ಜನನ ಪ್ರಮಾಣಪತ್ರದ ಪೆಂಡಿಂಗ್ ಕೇಸ್ ಕುರಿತು ನ್ಯಾಯಾಽಶ ಪ್ರಿಯರವಿ ಜೊಗ್ಳೇಕರ್ ಪ್ರಸ್ತಾಪಿಸಿ, ಎಲ್ಲಿದ್ದಾರೆ ತಹಸೀಲ್ದಾರ್ ಎಂದಾಗ ಸಭೆಯಲ್ಲಿ ತಹಸೀಲ್ದಾರ್ ಪುರಂದರ ಹೆಗ್ಡೆ ಅನುಪಸ್ಥಿತಿಯಿತ್ತು. ತಹಸೀಲ್ದಾರ್ ಕಚೇರಿಯಿಂದ ಯಾಕೆ ಬಂದಿಲ್ಲ ಎಂದು ನ್ಯಾಯಾಽಶರು ಗರಂ ಆದರು. ಮಳೆ ಹಾನಿ ವರದಿ ಕೇಳಿದರೂ ಇನ್ನೂ ಅವರಿಗೆ ಕೊಡಲಾಗಿಲ್ಲ. ಇವತ್ತು ಮೀಟಿಂಗ್‌ಗೂ ಬರಲಿಲ್ಲ ಎಂದಾಗ, ನ್ಯಾಯಾಽಶೆ ಸರಿತಾ ನ್ಯಾಯಾಲಯದ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲೂ ಸರಿಯಾಗಿ ಹಾಜರಾಗುತ್ತಿಲ್ಲ ಎಂದರು. ಮತ್ತೆ ಕಂದಾಯ ಇಲಾಖೆಯ ಬಗ್ಗೆ ಪ್ರಶ್ನೆ ಕೇಳಿದಾಗ ಸಿಬ್ಬಂದಿಯಿಂದ ಪ್ರತ್ಯುತ್ತರ ಬರದಿದ್ದಾಗ, ದೂರವಾಣಿಯಲ್ಲಿ ಇದ್ದಾರೆ ಹೊರತು ಉತ್ತರ ನೀಡುವ ಕಾರ್ಯ ಮಾಡುತ್ತಿಲ್ಲ ಎಂದು ನ್ಯಾಯಾಽಶರು ಹೇಳಿದರು. ಬಳಿಕ ಸಭೆಗೆ ಆಗಮಿಸಿದ ತಹಸೀಲ್ದಾರ್ ಅವರಲ್ಲಿ ಲೋಕ ಅದಾಲತ್‌ನಲ್ಲಿ ಜನನ ಪ್ರಮಾಣಪತ್ರವನ್ನು ಇತ್ಯರ್ಥಪಡಿಸುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net