ನೀರಿನ ಸಮರ್ಪಕ ಬಳಕೆ ಜಾಗೃತಿ ಅಗತ್ಯ

9 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನೀರು ಸಮಸ್ತ ಜೀವಿಗಳ ಜೀವಾಳ. ಭಾರತದಲ್ಲಿ ನೀರಿನ ಅವೈಜ್ಞಾನಿಕ ಬಳಕೆಯಿಂದ ಭವಿಷ್ಯದಲ್ಲಿ ಆತಂಕ ಸೃಷ್ಟಿಯಾಗಲಿದೆ ಎಂದು ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್​.ಎಸ್​. ಅಂಗಡಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಶಿವರಾಜ ಹೊಸಮನಿ ದತ್ತಿ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ನೀರಿನ ಸದ್ಬಳಕೆ ಕುರಿತು ಅವರು ಮಾತನಾಡಿದರು.
ಭಾರತದಲ್ಲಿ ನೀರಿನ ವೈಜ್ಞಾನಿಕ ಬಳಕೆ ಸಾಕಷ್ಟು ಸಮರ್ಪಕವಾಗಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ರ್ದುಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಬೆಳೆ ಹಾನಿಯಾಗುತ್ತಿದೆ. ನೀರಿನ ಸದ್ಬಳಕೆಗಾಗಿ ರೈತರು ತಾವು ಸಾಗುವಳಿ ಮಾಡುತ್ತಿರುವ ಜಮೀನಿನ ಸುತ್ತ ನೀರು ಬಸಿದು ಹೋಗಲು ಕಂದಕಗಳ ನಿರ್ಮಾಣ ಮಾಡಬೇಕು. ಹೊಲಗಳಲ್ಲಿ ಮಣ್ಣು ಸವೆತ ತಡೆಯಲು ಬದುಗಳ ನಿರ್ಮಾಣ ಹಾಗೂ ಕೆರೆಗಳ ನಿರ್ಮಾಣ ಮಾಡುವುದು ಅಗತ್ಯ. ನೀರಿನ ಸಮರ್ಪಕ ಬಳಕೆಗೆ ಜನಜಾಗೃತಿ ಅಗತ್ಯವಾಗಿದೆ ಎಂದರು.
ದತ್ತಿದಾನಿ ಈಶ್ವರಚಂದ್ರ ಹೊಸಮನಿ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಭಾವಿಕಟ್ಟಿ, ಬಿ.ಡಿ. ಪಾಟೀಲ, ಎಂ.ಡಿ. ಪಾಟೀಲ, ಡಾ. ಯರಗಟ್ಟಿ, ಸಿದ್ದಣ್ಣ ಕಂಬಾರ, ಚಂದ್ರಗೌಡ ಭೂಮನಗೌಡ್ರ, ವೀರಭದ್ರಗೌಡ ಪಾಟೀಲ, ಪ್ರಕಾಶ ಜಕಾತಿ, ರಾಜೇಂದ್ರ ಸಾವಳಗಿ, ಎಸ್​.ಕೆ. ಕುಂದರಗಿ, ಪ್ರಕಾಶ ಧರಣೆಪ್ಪಗೌಡರ, ಎನ್​.ಜಿ. ರಸಾಳಕರ, ಹೊಸಮನಿ ಕುಟುಂಬಸ್ಥರು, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀಶೈಲ ಹುದ್ದಾರ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net