ಸಮರ್ಪಕ ಅನುಷ್ಠಾನವಾಗಲಿ ‘ಕೂಸಿನ ಮನೆ’ ಯೋಜನೆ

kusina mane
Published on

ಮುಂಡರಗಿ: ಮಕ್ಕಳ ಪೌಷ್ಟಿಕ, ಬೌದ್ಧಿಕತೆ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಕೂಸಿನ ಮನೆ ಆರೈಕೆದಾರರ ಮೇಲಿರುತ್ತದೆ. ಉತ್ತಮ ತರಬೇತಿ ಪಡೆದು ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಣಿಯಾಗಬೇಕು ಎಂದು ತಾ.ಪಂ.ಯೋಜನಾಧಿಕಾರಿ ವಿಜಯಕುಮಾರ ಬೆಣ್ಣೆ ಹೇಳಿದರು.

ಸ್ಥಳೀಯ ತಾ.ಪಂ. ಸಾಮರ್ಥ್ಯಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೂಸಿನ ಮನೆ ಆರೈಕೆದಾರರ ಎರಡನೇ ಹಂತದ ಏಳು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತರಬೇತುದಾರರಾದ ಡಂಬಳ ಹೋಬಳಿ ಅಂಗನವಾಡಿ ಮೇಲ್ವಿಚಾರಕಿ ಎಸ್.ಎಸ್. ಹಾದಿಮನಿ, ಡಿಐಇಸಿ ವಿ.ಎಸ್. ಸಜ್ಜನ, ವಿಷಯ ನಿರ್ವಾಹಕ ಶಾಬುದ್ದಿನ್ ನದಾಫ್, ವಿಕೇಂದ್ರೀಕೃತ ತರಬೇತಿ ಸಂಯೋಜಕ ಮಂಜುನಾಥ ಮುಧೋಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net