ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ

2Rayabag1
Published on

ರಾಯಬಾಗ: ತಾಲೂಕಿನಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸೇವೆ ನೀಡುವ ಜತೆಗೆ ವಿದ್ಯಾರ್ಥಿಗಳ ಅನುಕೂಲತೆ ದೃಷ್ಟಿಯಿಂದ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಕಯುರವೇ ತಾಲೂಕಾಧ್ಯಕ್ಷ ಗಜಾನನ ಮಾಳಿ ಮಾತನಾಡಿ, ರಾಯಬಾಗ ಬಸ್ ಡಿಪೋದಿಂದ ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸುತ್ತಿಲ್ಲ. ಹೀಗಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಕಿಡಗೇಡಿಗಳ ಉಪಟಳ ಹಾಗೂ ರಾತ್ರಿ ವೇಳೆ ನಡೆಯುವ ಅನೈತಿಕ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಒತ್ತಾಯಿಸಿದರು.

ಡಿಪೋ ವ್ಯವಸ್ಥಾಪಕ ಜಿ.ಐ.ಬಸವಂತಪುರ, ಪಿಎಸ್‌ಐ ಶಿವಶಂಕರ ಮುಕರಿ, ಕರವೇ ಜಿಲ್ಲಾ ಉಪಾಧ್ಯಕ್ಷ ಅಮರೇಶ ತಾಳಿಕೋಟಿ, ರಾಜು ಹೊಸಟ್ಟಿ, ಈಶ್ವರ ಮಾಳಿ, ಲೋಕೇಶ ಮೇತ್ರಿ, ಸಚಿನ್ ಮೇತ್ರಿ, ಬಾಬು ಹೊಸಟ್ಟಿ, ಪಿಂಟು ಜಾನವಾಡೆ, ನಿತೀನ್ ಕುಸ್ತಿಗಾರ, ಗಜಾನನ ಮೇತ್ರಿ, ಸಾಗರ ಕುಲಗುಡೆ, ಸುನೀಲ ಮೇತ್ರಿ, ಸುಮೀತ ಕುಂಬಾರ, ಸಂದೀಪ ಕುಲಗುಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net