ಸಮರ್ಪಕ ಬಸ್ ಓಡಿಸಲು ಆಗ್ರಹ

Adequate bus driving demand
ಹುನಗುಂದ-ಮ್ಯಾಗೇರಿ ಮಾರ್ಗದಲ್ಲಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ ವತಿಯಿಂದ ಹುನಗುಂದ ಘಟಕದ ವ್ಯವಸ್ಥಾಪಕ ಅರವಿಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಕರವೇ ಮುಖಂಡ ಸಂಜಯಗೌಡ ಗೌಡರ, ಜಹೀರ ಸಂಗಮಕರ, ಮಂಜು ವಡ್ಡರ ಇದ್ದರು.
Published on

ಹುನಗುಂದ: ಹುನಗುಂದ ಬಸ್ ಘಟಕದಿಂದ ಹುನಗುಂದ-ಮ್ಯಾಗೇರಿ ಮಾರ್ಗದಲ್ಲಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೋವಾವಾರ ಹುನಗುಂದ ಬಸ್ ಘಟಕದ ವ್ಯವಸ್ಥಾಪಕ ಅರವಿಂದ ಭಜಂತ್ರಿಗೆ ಮನವಿ ಸಲ್ಲಿಸಿದರು.

ಕರವೇ ಕೂಡಲಸಂಗಮ ಘಟಕದ ಅಧ್ಯಕ್ಷ ಸಂಜಯಗೌಡ ಗೌಡರ ಮಾತನಾಡಿ, ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯಲ್ಲಿ 528 ವಿದ್ಯಾರ್ಥಿಗಳು ಓದುತ್ತಿದ್ದಾರೆ. ನಿತ್ಯ ಬೇರೆ ಬೇರೆ ಹಳ್ಳಿಗಳಿಂದ ಇಲ್ಲಿಗೆ ಆಗಮಿಸುತ್ತಿದ್ದು, ಬೆಳಗ್ಗೆ 10 ಗಂಟೆಗೆ ಶಾಲೆ ಆರಂಭವಾಗಿ ಸಂಜೆ 4.20 ಗಂಟೆಗೆ ಬಿಡುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಇಲ್ಲದ್ದರಿಂದ ತೊಂದರೆಯಾಗುತ್ತಿದೆ. ಈಗಾಗಲೇ ಒಂದೇ ಬಸ್ ಬರುತ್ತಿದ್ದು, ಇನ್ನೊಂದು ಬಸ್‌ನ್ನು ಹುನಗುಂದ- ಮ್ಯಾಗೇರಿಗೆ ಹೆಚ್ಚುವರಿಯಾಗಿ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಕರವೇ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಕರವೇ ಘಟಕದ ಪ್ರಧಾನ ಕಾರ್ಯದರ್ಶಿ ಜಹೀರ್ ಸಂಗಮಕರ, ಮಂಜು ವಡ್ಡರ, ಸೋಹಿಲ್ ಸುತಾರ, ಪ್ರವೀಣ ವಾಲೀಕಾರ, ರವಿ ಕೊಪ್ಪದ, ಸಂಗಮೇಶ ಗೌತಗಿ, ಕಿರಣ ವಡ್ಡರ, ದಶರಥ ವಡ್ಡ, ಸದ್ದಾಂ ಕಲಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net