

ನಂಜನಗೂಡು: ತಾಲೂಕಿನ ಹೆಡತಲೆ ಗ್ರಾಮದಲ್ಲಿ ಬಂಡಿ ಜಾತ್ರೆ ಅದ್ದೂರಿಯಾಗಿ ಜರುಗಿತು.
ನಂಜನಗೂಡು ತಾಲೂಕು ಹೆಡತಲೆ ಗ್ರಾಮದಿಂದ ಚಾಮರಾಜನಗರ ಜಿಲ್ಲೆಯ ಗಡಿ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ಎತ್ತಿನಗಾಡಿ ಕಟ್ಟಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬೆಟ್ಟದಲ್ಲಿ ಎರಡು ದಿನ ಉಳಿದು ವಿಶೇಷ ಪೂಜೆ ನೆರವೇರಿಸಲಾಯಿತು.
70 ಜತೆ ಎತ್ತಿನ ಗಾಡಿ ಕಟ್ಟಿಕೊಂಡು ಹೋಗಿದ್ದ ರೈತರು ಸೋಮವಾರ ಹೆಡತಲೆ ಗ್ರಾಮದಲ್ಲಿ ಎತ್ತಿನಗಾಡಿಗೆ ಅಲಂಕರಿಸಿ ನಂತರ ನಂದಿ ಧ್ವ್ವಜಕ್ಕೆ ಪೂಜೆ ಸಲ್ಲಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ, ಮಕ್ಕಳ ಕುಣಿತ, ಕಡ್ಡಿ ವರಸೆ ಜತೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.