ಚಿತ್ರದುರ್ಗದಲ್ಲಿ ವಿಶ್ವಕರ್ಮ ರಾಜ್ಯಸಮಾವೇಶ

PHOTO-30000000000
Published on

ಚಿತ್ರದುರ್ಗ: ನಮ್ಮ ಸಮುದಾಯದ ಶಕ್ತಿ ಪ್ರದರ್ಶನಕ್ಕಾಗಿ ಚಿತ್ರದುರ್ಗದಲ್ಲಿ ವಿಶ್ವಕರ್ಮ ರಾಜ್ಯಸಮಾವೇಶ ನಡೆಸಲಾಗುವುದೆಂದು ವಿಶ್ವಕರ್ಮ ಸಮುದಾಯ ಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್ ಹೇಳಿದರು. ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ನವೆಂಬರ್‌ನಲ್ಲಿ ಅದ್ದೂರಿಯಾಗಿ ಚಿತ್ರದುರ್ಗದಲ್ಲಿ ಸಮಾವೇಶ ಏರ್ಪಡಿಸಿ ನಮ್ಮ ಶಕ್ತಿ ಪ್ರದರ್ಶಿಸ ಬೇಕಿದೆ.

ಕೇಂದ್ರದಲ್ಲೂ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಸಮಾವೇಶದಲ್ಲಿ ಒತ್ತಡ ಹಾಕೋಣ. ಬೆಂಗಳೂರಲ್ಲಿ ವಿಶ್ವಕರ್ಮ ಭವನ ನಿರ್ಮಾಣವಾಗಬೇಕು. ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ಪ್ರಾರಂಭಿಸಬೇಕು. ನಮ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಬೇಕಾಗಿದೆ. ಅಹಂ,ಭಿನ್ನಾಭಿಪ್ರಾಯ ಸಂಘಟಿತರಾಗಿ ಸಮಾವೇಶವನ್ನು ಯಶಸ್ವಿಗೊಳಿಸ ಬೇಕು ಹಾಗೂ ಸರ್ಕಾರಗಳಿಂದ ನಮಗೆ ಸಿಗಬೇಕಾದ ನ್ಯಾಯಯುತವಾದ ಹಕ್ಕುಗಳನ್ನು ಪಡೆಯ ಬೇಕಿದೆ ಎಂದರು.

ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಬಿ.ಉಮೇಶ್ ಮಾತನಾಡಿ, ಚಿತ್ರದುರ್ಗ ಐತಿಹಾಸಿಕ ಸಮಾವೇಶದ ಮೂಲಕ ರಾಜ್ಯಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸೋಣ ಎಂದರು. ರಾಜ್ಯವಿಶ್ವಕರ್ಮ ಮಹಾಮಂಡಲದ ಅಧ್ಯಕ್ಷ ನಾಗರಾಜಾಚಾರ್ ಮಾತನಾಡಿ,ಸಮಾವೇಶದ ಯಶಸ್ವಿಗೆ ಪ್ರತಿ ಜಿಲ್ಲೆಯಲ್ಲೂ ಸಮಿತಿ ರಚಿಸಿಬೇಕೆಂದರು.

ರಾಜ್ಯನಿವೃತ್ತ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ನಾರಾಯಣಚಾರ್ ಮಾತನಾಡಿ,ಪಕ್ಷ ಬೇಧ ಮರೆತು ಎಲ್ಲ ರಾಜಕೀಯ ನಾಯಕರ ಸಮಾವೇಶಕ್ಕೆ ಆಹ್ವಾನಿಸ ಬೇಕೆಂದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಂಕರಾಚಾರ್ ಅಧ್ಯಕ್ಷತೆ ವಹಿಸಿದ್ದರು. ಬಿ.ರುದ್ರಾಚಾರ್, ಆರ್. ಪ್ರಸನ್ನಕುಮಾರ್, ಆರ್.ಮಧುಸೂದನ್, ಎ.ಕೃಷ್ಣಪ್ಪ,ಹನುಮಂತಾಚಾರ್,ಬಿ.ವೆಂಕಟೇಶ್,ಗಂಗಾಧರಾಚಾರ್,ಜಗದೀಶಾಚಾರ್,ವೆಂಕಟೇಶಾಚಾರ್,ಮೌನೇಶ್ವರಾಚಾರ್,ಬಿ.ನಟರಾಜಾಚಾ ರ್, ಎಂ.ಶಂಕರಮೂರ್ತಿ,ಪ್ರಸನ್ನಕುಮಾರ್ ಮತ್ತಿತರ ಸಮಾಜದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net