

ದೇವದುರ್ಗ: ತಾಲೂಕಿನ ಜಾಲಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪೊಲೀಸ್ ಠಾಣೆ ಕಟ್ಟಡಕ್ಕೆ ಹೆಚ್ಚುವರಿ ಎಸ್ಪಿ ಹರೀಶ್‌ಕುಮಾರ ಭಾನುವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಕಟ್ಟಡ ಕಾಮಗಾರಿ ಬಗ್ಗೆ ಗುತ್ತಿಗೆದಾರರಿಂದ ದೂರವಾಣಿ ಮೂಲಕ ಮಾಹಿತಿ ಪಡೆದರು. ಗುಣಮಟ್ಟದಲ್ಲಿ ಕಾಮಗಾರಿ ನಿರ್ವಹಣೆ ಮಾಡುವ ಜತೆಗೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ನಿಯಮ ಪ್ರಕಾರ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.
ನಂತರ ಠಾಣೆಗೆ ಭೇಟಿನೀಡಿ ವಿವಿಧ ಕೇಸ್‌ಗಳು ಹಾಗೂ ಸಿಬ್ಬಂದಿ ಕರ್ತವ್ಯದ ಬಗ್ಗೆ ಮಾಹಿತಿ ಪಡೆದರು. ಪಿಎಸ್‌ಐ ವೈಶಾಲಿ ಝಳಕಿ, ಪೊಲೀಸ್ ಪೇದೆಗಳಾದ ಹನುಮಂತ, ಉಮೇಶ, ರಾಜು ರಾಠೋಡ್, ಶಿವರಾಜ, ಅಯ್ಯಪ್ಪ, ದೇವರಾಜ, ಶ್ರೀಶೈಲ, ರಂಗನಾಥ, ದೇವಪ್ಪ ಇತರರಿದ್ದರು.