

ವಿಜಯಪುರ : ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆ. 31 ರಂದು ಬೆಳಗ್ಗೆ 10.30ಕ್ಕೆ ವಿಜಯಪುರದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ "ನಮ್ಮ ಸಂವಿಧಾನ ನಮ್ಮ ಹೆಮ್ಮೆ' ಹಾಗೂ "ದೇವರಗೆಣ್ಣೂರು' ಕೃತಿಗಳ ಬಿಡುಗಡೆ ಸಮಾರಂಭ ನಡೆಯಲಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯ ಎಲ್.ಎನ್. ಮುಕುಂದರಾಜ್ ಕೃತಿಗಳನ್ನು ಬಿಡುಗಡೆಗೊಳಿಸುವರು. ಗುಲರ್ಬಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಸಮಾರಂಭ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ಕೆ. ಆನಂದ, ಎಸ್ಪಿ ಲಕ್ಷ$್ಮಣ ನಿಂಬರಗಿ ಮತ್ತು ಜಿ.ಪಂ. ಸಿಇಒ ರಿಷಿ ಆನಂದ ಉಪಸ್ಥಿತಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ಕುಲಪತಿಗಳಾದ ಪೊ. ವಿಜಯಾ ಕೋರಿಶೆಟ್ಟಿ ಅಧ್ಯತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಚಲವಾದಿ ಸಮಾಜದ ಹಿರಿಯರಾದ ಚಂದ್ರಶೇಖರ ಕೊಡಬಾಗಿ, ಬುದ್ಧ ವಿಹಾರ ನಿರ್ಮಾಣ ಸಮಿತಿಯ ಅಧ್ಯ ರಾಜಶೇಖರ ಯಡಹಳ್ಳಿ, ಕಸಾಪ ಜಿಲ್ಲಾಧ್ಯ ಹಾಸಿಂಪೀರ ವಾಲೀಕಾರ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯ ಡಾ. ಅರ್ಜುನ ಗೊಳಸಂಗಿ ಹಾಗೂ ಸಾಹಿತಿ ದೊಡ್ಡಣ್ಣ ಭಜಂತ್ರಿ ಭಾಗವಹಿಸುವರು.
ಉಪನ್ಯಾಸಕಿ ಡಾ. ಸುಜಾತಾ ಚಲವಾದಿ, ಸುರೇಶ ಶೇಡಶ್ಯಾಳ, ಲಂಬೂ ನಾಗರಾಜ, ಡಾ. ಮಲ್ಲಿಕಾರ್ಜುನ ಸಂದೀಮನಿ ಹಾಗೂ ಡಾ. ನಾಗರಾಜ ಮುರಗೋಡ ಕೃತಿ ಪರಿಚಯಿಸುವರು ಎಂದು ಮೈಸೂರಿನ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಹಾಗೂ ನಗರದ ಚನ್ನಬಸಮ್ಮ ಚಂದಪ್ಪ ಪ್ರತಿಷ್ಠಾನದ ಉಪಾಧ್ಯ ಅಭಿಷೇಕ ಚಕ್ರವರ್ತಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.