ಕಲಾವಿದರನ್ನು ಕಾಡಲಿದೆ 'ಎಐ' ಸವಾಲು

Gadyaal 1
Published on

ಎಡಿಸಿ ಅಬೀದ್​ ಗದ್ಯಾಳ ಅನಿಸಿಕೆ

ಕಲಾ ಪ್ರದರ್ಶನ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ನೀರು, ಗೊಬ್ಬರ, ಬೆಳಕು, ಗಾಳಿಯಿಂದ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ಫಲ ನೀಡುವಂತೆ ಮಕ್ಕಳಲ್ಲಿರುವ ಕಲಾ ಪ್ರತಿಭೆಗೆ ಸೂಕ್ತ ಅವಕಾಶ ಅಗತ್ಯ. ಕಲಾವಿದರಿಗೆ ಸಮಾಜದಲ್ಲಿ ಸೂಕ್ತ ಪ್ರೋತ್ಸಾಹದ ಕೊರತೆಯ ನಡುವೆ ಇದೀಗ ಆಧುನಿಕ ಕೃತಕ ಬುದ್ಧಿಮತ್ತೆ (ಎಐ)ಯು ಸವಾಲಾಗಿ ಕಾಡಲಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅನಿಸಿಕೆ ವ್ಯಕ್ತಪಡಿಸಿದರು.

Gadyaal 2
ಉಡುಪಿಯ ಕುಂಜಿಬೆಟ್ಟು ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ಇನಾಯತ್​ ಆರ್ಟ್​ ಗ್ಯಾಲರಿಯಲ್ಲಿ ಗುರುವಾರ (ಅ.2) ಆಯೋಜಿಸಿದ್ದ ಜಿಲ್ಲಾ ಮಟ್ಟದ ಅರೇಬಿಕ್​ ಕ್ಯಾಲಿಗ್ರಫಿ ಕಲಾ ಪ್ರದರ್ಶನ ಮತ್ತು ಗಾಂಧಿ ಜಯಂತಿ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಮಹಾಪ್ರಬಂಧಕ ಎಚ್​.ಕೆ. ಗಂಗಾಧರ, ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಖ್​ ವಾಹಿದ್​ ದಾವೂದ್, ಉದ್ಯಮಿ ಯ.ವಿಶ್ವನಾಥ ಶೆಣೈ ಮಾತನಾಡಿದರು.

ಡಾ.ಕಿರಣ ಆಚಾರ್ಯ, ಕೃಷ್ಣಮೂರ್ತಿ ರಾವ್​, ಬೆಂಗಳೂರಿನ ಮೊಹಮ್ಮದ್​ ಸಹಿನ್​, ಇಂದ್ರಾಳಿ ಮಸೀದಿಯ ಧರ್ಮಗುರು ಮೌಲಾನಾ ಮಸಿಯುಲ್ಲಾ ಖಾನ್​, ಇನಾಯತ್​ ಆರ್ಟ್​ ಗ್ಯಾಲರಿಯ ಲಿಯಾಕತ್​ ಅಲಿ ಉಪಸ್ಥಿತರಿದ್ದರು.

ರಾಘವೇಂದ್ರ ಪ್ರಭು ಕರ್ವಾಲ್​ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಂತಸದಿಂದ ಮಾಡಿದ ಕೆಲಸ ಯಾವತ್ತೂ ವಿಫಲವಾಗದು. ಹೆತ್ತವರು ಮಕ್ಕಳಿಗೆ ಮನೆಯಲ್ಲಿ ಹಾಗೂ ಶಿಕ್ಷಕರು ಶಾಲೆಯಲ್ಲಿ ಸಂತಸದಿಂದ ಕಲಿಕೆಯ ವಾತಾವರಣ ರೂಪಿಸಬೇಕು. ಅದರಿಂದ ಅವರಲ್ಲಿ ಕಲಿಸಾಕ್ತಿ ಹೆಚ್ಚುತ್ತದಲ್ಲದೆ, ಕೌಶಲವೂ ಅನಾವರಣಗೊಳ್ಳುತ್ತದೆ. | ಅಬೀದ್​ ಗದ್ಯಾಳ. ಉಡುಪಿ ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net