ಮುಳಬಾಗಿಲಿನಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್​

26 mbl 3
module: a; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 125.0; hist255: 0.0; hist252~255: 0.0; hist0~25: 0.0;
Published on

ಮುಳಬಾಗಿಲು: ಎರಡೂ ಹೊಸ ರಾಜಹಂಸ ಬಸ್​ ಸೇರಿ ಒಟ್ಟು ಐದು ಸಾರಿಗೆ ಬಸ್ಸುಗಳು ಬೆಳಗಿನ ಸಮಯದಲ್ಲಿ ಬೆಂಗಳೂರಿಗೆ ನೇರವಾಗಿ ಹೋಗುವ ವ್ಯವಸ್ಥೆ ಮಾಡುವ ಮೂಲಕ ಕೆಎಸ್​ಆರ್​ಟಿಸಿ ಪ್ರಯಾಣಿ ಸ್ನೇಹಿ ಎಂಬುದನ್ನು ಸಾಬೀತು ಮಾಡಿದೆ.

ಮುಳಬಾಗಿಲಿನಿಂದ ಕೋಲಾರ ಮತ್ತು ಬೆಂಗಳೂರಿಗೆ ತೆರಳವು ಸಮರ್ಪಕ ಬಸ್​ಗಳ ವ್ಯವಸ್ಥೇ ಇಲ್ಲದೇ ತೊಂದರೆಯಾಗಿತ್ತು. ಈ ಬಗ್ಗೆ ಮೇ 23ರಂದು ವಿಜಯವಾಣಿಯಲ್ಲಿ "ಸೇವೆ ಮರೆತ ಸಾರಿಗೆ ಸಂಸ್ಥೆ' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಎಚ್ಚೆತ್ತ ಸಾರಿಗೆ ಸಂಸ್ಥೆ ಮುಳಬಾಗಿಲಿನಿಂದ ಬೆಂಗಳೂರಿಗೆ ನೇರ ಬಸ್​ ವ್ಯವಸ್ಥೆ ಮಾಡಿದೆ.

ಸಾಮಾನ್ಯ ವೇಗದೂತ 3 ಬಸ್​ ಮತ್ತು 2 ರಾಜಹಂಸ ಬಸ್​ಗಳು ಸೋಮವಾರದಿಂದಲೇ ಸಂಚಾರ ಮಾಡುತ್ತಿವೆ. ರಾಜಹಂಸ ಬಸ್​ನಲ್ಲಿ ಚಾಲಕ ಮಾತ್ರ ಇದ್ದು, ಸಾಮಾನ್ಯ ಎಕ್ಸ್​ಪ್ರೆಸ್​ನ ದರದಲ್ಲೇ ಟಿಕೆಟ್​ ನೀಡಲಾಗುತ್ತಿದೆ. ಈ ಬಸ್​ನಲ್ಲಿ ಶಕ್ತಿ ಯೋಜನೆ ಸೇರಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಯಾವುದೇ ಬಸ್​ ಪಾಸ್​ಗಳಿಗೆ ಅವಕಾಶ ಕಲ್ಪಿಸಿಲ್ಲ, ಟಿಕೆಟ್​ ದರ ನೀಡಿ ಪ್ರಯಾಣಿಸಬಹುದು, ಉಳಿದ ವೇಗದೂತ ಬಸುಗಳಲ್ಲಿ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಸೇರಿ ಮಾಸಿಕ, ದೈನಂದಿನ ಪಾಸ್​ ಸೇರಿ ಅಂಗವಿಕಲ ಪಾಸುಗಳು ಸಂಚರಿಸಬಹುದು.

ಮೂರು ಸಾಮಾನ್ಯ ವೇಗದೂತ ಮತ್ತು ಹೊಸದಾಗಿ ಬಂದಿರುವ 2 ಎರಡು ರಾಜಹಂಸ ಬಸ್ಸುಗಳು ಸೇರಿ ಒಟ್ಟು 5 ನೇರ ಬಸ್ಸುಗಳು ನಿತ್ಯ ಮುಳಬಾಗಿಲಿಂದ ಬೆಂಗಳೂರಿಗೆ ಸಂಚರಿಸುತ್ತಿವೆ. ಎಲ್ಲ ಬಸುಗಳಲ್ಲೂ 140 ರೂ. ಟಿಕೆಟ್​ ದರ ಇರಲಿದ್ದು, ರಾಜಹಂಸದಲ್ಲಿ ಮಾತ್ರ ಉಚಿತ ಬಸ್​ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ.

- ಅನ್ಸರ್​ ಪಾಷಾ

ಕೆಎಸ್​ಆರ್​ಟಿಸಿ, ಘಟಕ ವ್ಯವಸ್ಥಾಪಕ, ಮುಳಬಾಗಿಲು

ನೇರ ಬಸ್​ ವ್ಯವಸ್ಥೆ ಮಾಡಿರುವುದು ಹೀಗೆ ಮುಂದುವರಿಯಬೇಕು. ವಿವಿಧ ಬಸ್​ ಪಾಸುಗಳು ಸೇರಿ ಶಕ್ತಿ ಯೋಜನೆಯಿಂದಲೂ ಬಸ್​ಗೆ ಲಾಭ ಇಲ್ಲದಿದ್ದರೂ ಸಂಸ್ಥೆಗೆ ಲಾಭ ಬರುತ್ತದೆ. ಇದನ್ನು ಪರಿಗಣಿಸಬೇಕು.

- ಕೆ.ವಿ.ಸಾಮೇಗೌಡ

ಕೊಲದೇವಿ, ಮುಳಬಾಗಿಲು ತಾಲೂಕು

ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡ ನಂತರ ಸಾರಿಗೆ ಸಂಸ್ಥೆ ಸದ್ಯಕ್ಕೆ ಬಸ್​ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಇದೇ ರೀತಿ ರಾತ್ರಿ ವೇಳೆಯಲ್ಲೂ ಕ್ರಮ ವಹಿಸಬೇಕು. ಆಗಲೇ ಪ್ರಯಾಣ ಸ್ನೇಹಿ, ಜನಸ್ನೇಹಿ ಸಾರಿಗೆ ಸಂಸ್ಥೆಯಾಗಲು ಸಾಧ್ಯ.

- ಜಿ.ಮಂಜುನಾಥ್​

ಗುಣಿಗಂಟಿಪಾಳ್ಯ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net