

ನೆಲಮಂಗಲ : ರಾಜ್ಯ ಸರ್ಕಾರ ಮಾಗಡಿ ತಾಲೂಕಿನ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿದೆ.
ಸ್ವಾತಂತ್ರ$್ಯ ಬಂದಾಗಿನಿಂದಲೂ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಜನರು ವಿಧಾನಸಭಾ ಚುನಾವಣೆಯಲ್ಲಿ ನೆಲಮಂಗಲ ೇತ್ರಕ್ಕೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ೇತ್ರಕ್ಕೆ ಮತದಾನ ಮಾಡುತ್ತಿದ್ದರು. ಕಂದಾಯ ದಾಖಲೆ ಸೇರಿ ವಿವಿಧ ದಾಖಲೆಗಳು ಮಾಗಡಿ ತಾಲೂಕಿನಲ್ಲಿ ಇದ್ದು, ಸೋಲೂರು ಹೋಬಳಿಯ ಜನತೆ ಅತಂತ್ರ ಪರಿಸ್ಥಿತಿಯಲ್ಲಿ ಇದ್ದರು. ಶಾಸಕರಾಗಿ ಆಯ್ಕೆಯಾದ ಬಹುತೇಕರು ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಆಗಿರಲಿಲ್ಲ. ಇದೀಗ ಶಾಸಕ ಎನ್.ಶ್ರೀನಿವಾಸ್ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿಸಿದ್ದು, ಸೋಲೂರು ಹೋಬಳಿ ಜನತೆಯ ಬಹುವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ಸಂಭ್ರಮಾಚರಣೆ: ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕು ಕಚೇರಿ ಮುಂಭಾಗ ಗುರುವಾರ ಸಂಜೆ ಸಮಾವೇಶಗೊಂಡ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಮಾತನಾಡಿ, ಸೋಲೂರು ಹೋಬಳಿ ಜನರ ಕನಸು ನನಸಾಗಿದೆ. ಶಾಸಕ ಎನ್.ಶ್ರೀನಿವಾಸ್ ಅವರು ಚುನಾವಣೆ ಪೂರ್ವದಲ್ಲಿ ಈ ಬಗ್ಗೆ ಭರವಸೆ ನೀಡಿದ್ದರು. ಅವರು ನುಡಿದಂತೆ ನಡೆದಿದ್ದಾರೆ ಎಂದರು. ನಗರ ಬ್ಲಾಕ್ ಅಧ್ಯಕ್ಷ ಸಿ.ಪ್ರದಿಪ್, ಕಸಬಾ ಬ್ಲಾಕ್ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಟಿ.ನಾಗರಾಜು, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟಿ$ಮೂರ್ತಿ, ಗ್ಯಾರಂಟಿ ಸಮಿತಿ ಅಧ್ಯೆ ನಾಗರತ್ನಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡ ಮುನಿಯಪ್ಪ, ಸಿ.ಎಂ.ಗೌಡ, ಲ್ಮಕಾಂತ್ ಕೆ.ವಸಂತ್, ಸುನೀಲ್, ಜಗದೀಶ್, ಚಿಕ್ಕಣ್ಣ, ಪ್ರಕಾಶ್, ನಾರಾಯಣ್ಗೌಡ, ಪ್ರಸನ್ನ, ರುಕ್ಮಿಣಿ ಉಪಸ್ಥಿತರಿದ್ದರು.
ಮತದಾನ ಮಾಡುವುದು ನೆಲಮಂಗಲ ಕ್ಷೇತ್ರದ ಅಭ್ಯರ್ಥಿಗಾದರೂ ದಾಖಲೆಗಳು, ಆಡಳಿತ ಅಧಿಕಾರಿಗಳ ಭೇಟಿಗೆ ಮಾಗಡಿ ತಾಲೂಕಿಗೆ ಹೋಗಬೇಕಿತ್ತು. ಸ್ವಾತಂತ್ರ$್ಯ ಬಂದಾಗಿನಿಂದಲೂ ಸೋಲೂರು ಹೋಬಳಿ ಒಂದು ರೀತಿ ಅತಂತ್ರವಾಗಿತ್ತು. ಈಗ ಎಲ್ಲದಕ್ಕೂ ಮುಕ್ತಿ ದೊರೆತಂತಾಗಿದೆ. > ಎನ್.ಆರ್.ಶರ್ಮ ಸೋಲೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ