

ಕಾಗವಾಡ: ಪ್ರಸ್ತುತ ದಿನಗಳಲ್ಲಿ ಯುವಜನತೆ ದುಶ್ಚಟಗಳಿಗೆ ಅಂಟಿಕೊಂಡು ಅಮೂಲ್ಯ ಬದುಕು ಕಳೆದುಕೊಳ್ಳುತ್ತಿದ್ದಾರೆ. ವ್ಯಸನ ತ್ಯಜಿಸಿ ಆರೋಗ್ಯಯುತ ಜೀವನ ನಡೆಸಬೇಕು ಎಂದು ಮಿರಜದ ನಿರ್ಮಲ್ ವ್ಯಸನಮುಕ್ತಿ ಕೇಂದ್ರದ ತಜ್ಞ ವೈದ್ಯ ಡಾ. ಚಂದ್ರಶೇಖರ ಹಳಿಂಗಳೆ ಹೇಳಿದರು.
ಮಿರಜ ತಾಲೂಕಿನ ಅರಗ ಗ್ರಾಮದಲ್ಲಿ ಜೈನ ಮುನಿಗಳ ಸಾನ್ನಿಧ್ಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚಕಲ್ಯಾಣ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಶ್ಚಟಗಳ ಪರಿಣಾಮ ಮತ್ತು ಮುಕ್ತಿ ಕುರಿತು ಕಿರು ನಾಟಕದ ಮೂಲಕ ಮಾಹಿತಿ ನೀಡಿ, ಜಾಗೃತಿ ಮೂಡಿಸಿದರು. ವಿನಾಯಕ ಕವಡೆ ಮಾತನಾಡಿ, ಡಾ.ಚಂದ್ರಶೇಖರ ಹಳಿಂಗಳೆ ಮಿರಜ ಪಟ್ಟಣದಲ್ಲಿ ವ್ಯಸನಮುಕ್ತಿ ಕೇಂದ್ರ ತೆರೆದು ಕಳೆದ 20 ವರ್ಷಗಳಿಂದ ಯುವಜನತೆಯನ್ನು ವ್ಯಸನಮುಕ್ತರನ್ನಾಗಿಸಲು ಶ್ರಮಿಸುತ್ತಿದ್ದಾರೆ ಎಂದರು.
ನಾನು ವ್ಯಸನ ಮುಕ್ತನಾಗುತ್ತೇನೆ ಎಂಬ ಪ್ರತಿಜ್ಞೆ ಮಾಡಿ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಆಸ್ಪತ್ರೆಗೆ ಬರುವವರಿಗೆ ಜ.1 ರಿಂದ 4 ರ ವರೆಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಾಹಿತಿಗಾಗಿ ಮೊ: 9922646566, 9028081339 ಗೆ ಸಂಪರ್ಕಿಸಿಬಹುದಾಗಿದೆ ಎಂದು ಮಾಹಿತಿ ನೀಡಿದರು. ನಿರ್ಮಲ ಆಸ್ಪತ್ರೆ ಸಿಬ್ಬಂದಿ ಸಾಗರ ಜಾಧವ, ಅನುಜಾ ಯರನಾಳೆ, ಸ್ವರೂಪ ರಾಯನಾಡೆ, ಪ್ರಶಾಂತ ಜಾಧವ, ಹರೀಶ ಲೋಹಾರ, ಪವನ ಕೂಗೆ ಇತರರಿದ್ದರು.