

ಮುಂಡರಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಎನ್‌ಎಸ್‌ಎಸ್ ಹಾಗೂ ರೋವರ್ ಘಟಕದ ವತಿಯಿಂದ ಇತ್ತೀಚೆಗೆ ಇಳಕಲ್ ಮಹಾಂತ ಶಿವಯೋಗಿಗಳ ಜಯಂತ್ಯುತ್ಸವ ನಿಮಿತ್ತ ವ್ಯಸನಮುಕ್ತ ದಿನ ಆಚರಿಸಲಾಯಿತು.
ಉಪನ್ಯಾಸಕರಾದ ಜಾಕೀರಹುಸೇನ್ ಹಾಗೂ ಮಲ್ಲೇಶ ಭಜಂತ್ರಿ ಅವರು ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಸಮಾಜ ನಿರ್ಮಾಣ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಪ್ರಾಚಾರ್ಯೆ ಜಯಲಕ್ಷ್ಮೀ ಕುರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಮೆಗೇರಿ ಆನಂದರಡ್ಡಿ, ಉಪನ್ಯಾಸಕರಾದ ಆರ್.ಆರ್. ಇನಾಮದಾರ, ಚೆನ್ನದಾಸರ, ಅರುಣಾ ಗುಜರಿ, ಇತರರಿದ್ದರು.