ದರ್ಶನ್‌ ಪಾಲಿಗೆ ಪವಿತ್ರಾ ಗೌಡ ಶನಿ, ಹೆಣ್ಣಿನ ವ್ಯಾಮೋಹ, ನಶೆಯೇ ಈ ಸ್ಥಿತಿಗೆ ಕಾರಣ; ದಚ್ಚು ಮೊದಲ‌ ಗುರು ಬೇಸರ

addandacariappa
Published on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಮಂದಿ ಬಂಧನವಾಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಕಳುಹಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ, ಶೆಡ್​ನಲ್ಲಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ ಎಲ್ಲೆಡೆ ಡಿ-ಗ್ಯಾಂಗ್​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲಿ ಹಿರಿಯ ರಂಗಕರ್ಮಿ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಖಾಸಗಿವಾಹಿನಿ ಜತೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಗುರು ಅಡ್ಡಂಡ ಕಾರ್ಯಪ್ಪ ಮಾತನಾಡಿ, ನಾನೊಬ್ಬ ಕಲಾವಿದ, ದರ್ಶನ್​ ಕೂಡಾ ಕನ್ನಡ ಸಿನಿಮಾರಂಗದ  ಕಲಾವಿದರಲ್ಲಿ ಮೇರು ನಟನಾಗಿ ಬೆಳೆದವನು. ಈ ಪ್ರಕರಣದಿಂದ ಅವನಿಗೆ ಈ ಸ್ಥಿತಿ ಬಂತಲ್ಲ ಎಂದು ತುಂಬಾ ನೋವಾಗಿದೆ. ದರ್ಶನ್ ಅವರ ಆರಂಭಿಕ ಜೀವನ, ಸೌಜನ್ಯ, ಮುಗ್ಧತೆ ಯಾಕೆ ಮಾಯವಾಯ್ತು? ಕೀರ್ತಿಯೇ ಅವನಿಗೆ ಮುಳುವಾಯ್ತಾ? ಅದೇ ಅಹಂಕಾರವಾಯ್ತಾ? ಮದ್ಯಪಾನ ? ಹೆಣ್ಣಿನ ವ್ಯಾಮೋಹ ಮುಳುವಾಯ್ತಾ? ಎನ್ನುವುದು ಪ್ರಶ್ನೆಯಾಗಿದೆ. ಕನ್ನಡ ಇಂಡಸ್ಟ್ರಿಯಲ್ಲಿ ಹೇಗೆ ಇರಬೇಕು? ಇರಬಾರದು ಎಂದು ಹೇಳುವುದಕ್ಕೆ ದರ್ಶನ್​​ ಒಂದು ಪಾಠವಾಗಿದ್ದಾರೆ ಎಂದಿದ್ದಾರೆ.

ಪೋನ್ನಂಪೇಟೆ ಎನ್ನುವ ಊರು ದರ್ಶನ್​ ಅವರ ಅಜ್ಜಿ ಮನೆ. ನಾನು ರಂಗ ಶಿಬಿರ ಮಗಿಸಿ ಬಂದಾಗ ನನ್ನ ಊರಲ್ಲಿ ರಂಗಶಿಬಿರ ಮಾಡುತ್ತಿದ್ದೇನು. ಆಗ ನನಗೆ ದರ್ಶನ್​​ ಪರಿಚಯವಾಗಿತ್ತು. ನಿನಾಸಂಗೆ ಹೋಗಲು ಹೇಳಿದ್ದೇನು. ನಂತ್ರ ಅಲ್ಲಿ ತರಬೇತಿ ಪಡೆದು ಬಂದನು. ನಂತರ ಸಿನಿಮಾ ಇಂಡಸ್ಟ್ರಿಯಲ್ಲಿ ಕಷ್ಟಪಟ್ಟಿದ್ದಾನೆ ಎಂದಿದ್ದಾರೆ.

ಅವನು ಹಾದಿ ತಪ್ಪಿದ್ದಾನೆ ಎಂದರೆ ಒಂದು ಅವನಿಗೆ ಶಿಕ್ಷಣದ ಕೊರತೆ ಹಾಗೂ ಅವನಿಗೆ ಈಗ ಇರುವಂತಹ ಸ್ನೇಹಿತರಾಗಿದ್ದಾರೆ. ಇದು ಅವನ ಆಯ್ಕೆ ಆಗಿತ್ತು. ಪತ್ನಿಗೆ ಹಿಂಸೆ ಕೊಟ್ಟು ಸುದ್ದಿಯಾಗಿದ್ದ, ಆಗ ಮೀಡಿಯಾಗಳು ಬ್ಯಾನ್​ ಮಾಡಿದ್ದವು. ಯಾವ ನಟ, ನಟಿಯನ್ನು ಹೀಗೆ ಮೀಡಿಯಾ ಬ್ಯಾನ್​​ ಮಾಡಿತ್ತು ಹೇಳಿ? ಒಳ್ಳೆಯ ಗುಣವನ್ನು ಉಪಯೋಗಿಸಿಕೊಳ್ಳದೆ ಹೋದ ದರ್ಶನ್ ಗೋವು, ಕೃಷಿ, ರೈತರ ಕುರಿತಾಗಿ ಕಾಳಜಿ ಹೊಂದಿದ್ದ. ಆದರೆ ಇದೆಲ್ಲ  ಗುಣವನ್ನು ಬಿಟ್ಟು ಹೆಂಡ, ಹೆಣ್ಣು, ಅಹಂಕಾರ ಹಿಂದೆ ಹೋದನು ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ತಪ್ಪು ಮಾಡಿದ್ದಾನೆ, ಶಿಕ್ಷೆ ನೀಡಲು ಕಾನೂನು ಇದೆ. ಆದರೆ ಇಲ್ಲಿ ಸಿನಿಮಾ ಸ್ಟೈಲ್​ನಲ್ಲಿ ಎತ್ತಾಕಿಕೊಂಡು ಬನ್ನಿ ಎಂದು ಹೇಳಿ ಸಿಗರೇಟ್​​​​ನಲ್ಲಿ ಸುಟ್ಟು ಚಿತ್ರ ಹಿಂಸೆ ಕೊಟ್ಟು ಪ್ರಾಣ ತೆಗೆಯುತ್ತಾರೆ.  ಆದರೆ ಇದು ಬದುಕು ಸಿನಿಮಾ ಅಲ್ಲ, ಇವನು ಇದನ್ನು ಅರ್ಥ ಮಾಡಿಕೊಳ್ಳದೆ ಹೋದ ಎಂದಿದ್ದಾರೆ.

ಅವನಿಗೆ ಅವನೆ ಶತ್ರು, ಪವಿತ್ರಾ ಗೌಡ ಶನಿಯಾಗಿ ಬಂದರು. ಅವಳಿಗಾಗಿ ಇವನು ಇಷ್ಟೆಲ್ಲ ಮಾಡಿದ್ದಾನೆ. ಕೊಲೆಯಾದ ರೇಣುಕಾಸ್ವಾಮಿ ಅಶ್ಲೀಲ ವಿಡಿಯೋ ಕಳಿಸಿದ್ದು ಅವಳಿಗೆ ಆದರೂ ಕೂಡಾ ಶಿಕ್ಷೆ ಕೊಡಲು ಕಾನೂನು ಇತ್ತು. ಈಗಲೂ ನನ್ನ ಶಿಷ್ಯ ಅಂತಾ ಹೇಳಿಕೊಳ್ಳುತ್ತೇನೆ. ಆದರೆ ತುಂಬಾ ಬೇಸರ ಆಗುತ್ತದೆ. ಕಷ್ಟದ ದಿನಗಳು ಬರುತ್ತವೆ. ಆದರೆ ದರ್ಶನ್​ ಕೊಲೆ ಪ್ರಕರಣದಲ್ಲಿ ಇರುವುದು ಬೇಸರವಾಗಿದೆ ಎಂದಿದ್ದಾರೆ.

ಜನಕ್ಕೆ ಈಗ ಮರೆವು... ಜನ ಎಲ್ಲಾ ವಿಚಾರವನ್ನು ಮರೆಯುತ್ತಾರೆ. ಇವನ ಕೈನಲ್ಲಿದೆ ಅವನು ಹೇಗೆ ಜೀವನ ನಡೆಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ದರ್ಶನ್​​ ಹೊರಗೆ ಬಂದರೆ ಸಂಸ್ಕಾರ ಪಡೆದು ಹೊಸ ಜೀವನ ಕಟ್ಟಿಕೊಂಡು ಎಲ್ಲವನ್ನು ಮರೆತು ನಡೆ ಎಂದು ಹೇಳುತ್ತೇನೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net