ಇರುವ ಭೂಮಿ ರಕ್ಷಿಸೋಣ:ಎಡಿಸಿ ಸಾವಿತ್ರಿ ಕಡಿ

ADC savitri Kadi environment day celebration Koppal
ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಎಡಿಸಿ ಸಾವಿತ್ರಿ ಕಡಿ ಮಾತನಾಡಿದರು. ಹಿರಿಯ ಸಿವಿಲ್​ ನ್ಯಾಯಾಧೀಶ ಎಂ.ಆರ್​.ಒಡೆಯರ್​, ಪರಿಸರ ಅಧಿಕಾರಿಗಳಾದ ಬಿ.ಎಸ್​.ಮುರಳೀಧರ, ಡಾ.ದೊಡ್ಡಶಾನಯ್ಯ, ಪ್ರಾಚಾರ್ಯ ಡಾ.ಚನ್ನಬಸವ ಇದ್ದರು.
Published on

ಕೊಪ್ಪಳ: ಇರುವ ಭೂಮಿ, ಪರಿಸರ ಹೆಚ್ಚಾಗುವುದಿಲ್ಲ. ಜನಸಂಖ್ಯೆ ಮಾತ್ರ ಏರಿಕೆಯಾಗುತ್ತಿದೆ. ಹೀಗಾಗಿ ಪರಿಸರ ರಕ್ಷಣೆ ಮಾಡಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಹೇಳಿದರು.

ನಗರದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಭವಿಷ್ಯದ ನಾಯಕರು. ನೀವೆಲ್ಲ ಪರಿಸರದ ಬಗ್ಗೆ ಅರಿಯಬೇಕು. ಜಾಗೃತಿ ಮೂಡಿಸಬೇಕು. ಜನಸಂಖ್ಯೆ ಹೆಚ್ಚಿದಂತೆ ಬೇಡಿಕೆ ಹೆಚ್ಚಲಿದೆ. ಕೈಗಾರಿಕೆಗಳು ಅಧಿಕವಾಗಲಿವೆ. ಪರಿಸರ ನಾಶವಾಗಲಿದೆ. ಇರುವ ಪರಿಸರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ಸಮತೋಲನ ಕಾಪಾಡದಿದ್ದರೆ ಅವಡಗಳಾಗಲಿವೆ. ಈ ಬಗ್ಗೆ ನಾವೆಲ್ಲ ಎಚ್ಚರದಿಂದ ಇರಬೇಕು ಎಂದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಎಂ.ಆರ್​.ಒಡೆಯರ್​ ಮಾತನಾಡಿ, ಮಾನವನ ದುರಾಸೆಯಿಂದ ಪರಿಸರ ನಾಶವಾಗುತ್ತಿದೆ. ಅರಣ್ಯ ಹೆಚ್ಚಾದರೆ ಉತ್ತಮ ಮಳೆ, ಬೆಳೆ ಆಗಲಿದೆ. ದಿನಕಳೆದಂತೆ ಅರಣ್ಯ ನಾಶವಾಗುತ್ತಿದೆ. ಅದನ್ನು ತಡೆಯಬೇಕು ಎಂದು ತಿಳಿಸಿದರು.

ಪರಿಸರ ಅಧಿಕಾರಿಗಳಾದ ಬಿ.ಎಸ್​.ಮುರಳೀಧರ, ಡಾ.ದೊಡ್ಡಶಾನಯ್ಯ, ಪ್ರಾಚಾರ್ಯ ಡಾ.ಚನ್ನಬಸವ ಮಾತನಾಡಿದರು. ಪರಿಸರ ದಿನ ಅಂಗವಾಗಿ ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರಣ್ಯ ರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪರಿಸರ ಅಧಿಕಾರಿ ಅಮರ್​, ಪ್ರಾಧ್ಯಾಪಕರಾದ ಡಾ.ನಾಗರಾಜ ದಂಡೋತಿ, ಪ್ರವಿಣ ಹಾದಿಮನಿ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್​, ಡಾ.ಶಶಿಕಾಂತ ಉಮ್ಮಾಪುರೆ, ಶರಣಪ್ಪ ಚೌವ್ಹಾಣ, ಡಾ.ಕರಿಬಸವೇಶ್ವರ ಬಿ., ಶ್ರೀದೇವಿ, ಡಾ.ಜಾಲಿಹಾಳ ಶರಣಪ್ಪ, ಡಾ. ಅರುಣಕುಮಾರ ಎ.ಜಿ., ಡಾ.ವೆಂಕಟೇಶ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net