ಗೂಡಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಉತ್ಪನ್ನ ಹಿಡಿದ ಎಡಿಸಿ

adc-raid-tobacco-product.
Published on

ಕಾರವಾರ: ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರು ಶನಿವಾರ ಸ್ವತಃ ಬೀದಿಗಿಳಿದು ಅಂಗಡಿಗಳಲ್ಲಿ ನಿಯಮ ಮೀರಿ ಮಾರುತ್ತಿದ್ದ ಸಿಗರೇಟ್, ಗುಟಕಾಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದರು.
ನಗರದ ಹಬ್ಬುವಾಡ ರಸ್ತೆಯ ವಿವಿಧ ಅಂಗಡಿಗಳಿಗೆ ಅವರು ತೆರಳಿದರು. ಅದಕ್ಕೂ ಪೂರ್ವದಲ್ಲಿ ಕೋಟ್ಪಾ ಜಾರಿ ಸಂಬಂಧ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ನಿಯಮಾನುಸಾರ ಪ್ರತ್ಯೇಕ ಅನುಮತಿ ಪಡೆಯಬೇಕಿದ್ದು, ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಅನುಮತಿ ಪಡೆದಿರುವ ಬಗ್ಗೆ ಪರಿಶೀಲಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಏಪ್ರಿಲ್ 23 ರಿಂದ ಮಾರ್ಚ್ 24 ರ ವರೆಗೆ ಕೋಟ್ಪಾ ಅಡಿ 954 ಪ್ರಕರಣಗಳನ್ನು ದಾಖಲಿಸಿದ್ದು, 1.48 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಅಽಕಾರಿಗಳು ಮಾಹಿತಿ ನೀಡಿದರು. ಡಿಎಚ್‌ಒ ಡಾ. ನೀರಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯಕ್, ಆರ್‌ಸಿಎಚ್ ಅಕಾರಿ ಡಾ.ನಟರಾಜ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಕಾರಿ ಡಾ. ರಮೇಶ ರಾವ್,ನಗರಸಭೆ ಪೌರಾಯುಕ್ತ ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net