

ಮಂಡ್ಯ: ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದಲ್ಲಿ ನಿಯೋಜಿಸಿರುವ ಏಜೆಂಟ್‌ಗಳ ಪಟ್ಟಿಯನ್ನು ಆ.25ರೊಳಗೆ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಗೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನೋಂದಾಯಿತ ರಾಜಕೀಯ ಪಕ್ಷಗಳ ಸಭೆ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣಾ ಕೆಲಸಗಳು ನಿರಂತರವಾಗಿ ನಿಖರ ಹಾಗೂ ಪಾರದರ್ಶಕವಾಗಿ ನಡೆಯುತ್ತಿರುತ್ತದೆ. ಬೂತ್ ಲೆವಲ್ ಏಜೆಂಟ್‌ಗಳು ಬಿಎಲ್ಒಗಳಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಆ.25ರೊಳಗಾಗಿ ಪ್ರತಿ ವಿಧಾನಸಭಾ ಕ್ಷೇತ್ರವಾರು ತಮ್ಮ ಪಕ್ಷದ ವತಿಯಿಂದ ನೇಮಕಗೊಂಡಿರುವ ಮತಗಟ್ಟೆ ಮಟ್ಟದ ಏಜೆಂಟರ ವಿವರವನ್ನು ಕಚೇರಿಗೆ ಸಲ್ಲಿಸಬೇಕು. ಭಾರತ ಚುನಾವಣಾ ಆಯೋಗ ನೀಡಲಾಗುವ ಸೂಚನೆಗಳನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತಿದ್ದು, ಅವುಗಳನ್ನು ಅನುಸರಿಸಿ ಚುನಾವಣಾ ಕೆಲಸಗಳಲ್ಲಿ ಯಾವುದೇ ತೊಂದರೆಯಾದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಟಿ.ಆರ್.ರವಿಕುಮಾರ್, ಬೊಮ್ಮಯ್ಯ, ರಮೇಶ್, ಶಿವಶಂಕರ್, ಸುಂಡಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.