ಸೆಕ್ಟರ್​ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸಿ

adc koppal sidrameshwar meeting democracy day celebration
Published on

ಕೊಪ್ಪಳ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ಸೆ.15ರಂದು ಮಾನವ ಸರಪಳಿ ರಚಿಸಲಾಗುತ್ತಿದೆ. ಪ್ರತಿ 100 ಮೀಟರ್​ಗೆ ಒಬ್ಬ ಸೆಕ್ಟರ್​ ಅಧಿಕಾರಿ ನೇಮಿಸಿದ್ದು ಸರಪಳಿ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕೆಂದು ಎಡಿಸಿ ಸಿದ್ರಾಮೇಶ್ವರ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಸೆಕ್ಟರ್​ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಕಾರ್ಯಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸಿ. ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ. ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಸಿಗಲಿದೆ. ಜನರು ಮಾನವ ಸರಪಳಿಯಲ್ಲಿ ಪಾಲ್ಗೊಂಡಿರುವ ಫೋಟೊ ತೆಗೆದು ಅಪ್​ಲೋಡ್​ ಮಾಡಬೇಕು. ಒಂದು ಫೋಟೊದಲ್ಲಿ ಗರಿಷ್ಠ ಐದು ಜನರಿಗೆ ಅವಕಾಶ. ಐದೂ ಜನ ಒಂದೇ ಫೋಟೋ ಅಪ್​ಲೋಡ್​ ಮಾಡಬಹುದು ಎಂದರು.

5 ಜನರಲ್ಲಿ ಪ್ರತಿಯೊಬ್ಬರೂ ಒಂದೇ ಫೋಟೊ ಇರುವ ಪ್ರತ್ಯೇಕ ಪ್ರಮಾಣಪತ್ರ ಪಡೆಯಬಹುದು. ಫೋಟೊ ಅಪ್​ ಲೋಡ್​ ಮಾಡಲಿಚ್ಛಿಸದವರು, ತಮ್ಮ ವಿವರ ಮಾತ್ರ ಅಪ್​ಲೋಡ್​ ಮಾಡಿ ಪಡೆಯಬಹುದು. ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವವರು ಲಿಂಕ್​ ಜಠಿಠಿಟಠ://ಛಛಿಞಟ್ಚ್ಟಚ್ಚಢಛಚಢಚ್ಟ್ಞಚಠಿಚಚ.ಜ್ಞಿ/್ಟಛಿಜಜಿಠಠ್ಟಿಚಠಿಜಿಟ್ಞ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು ತಳವಾರ, ಡಿಡಿಪಿಐ ಶ್ರೀಶೈಲ ಬಿರಾದಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷಿ$್ಮಕಾಂತ ನಾಲವಾರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಸೆಕ್ಟರ್​ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net