ವ್ಯಸನ ಮುಕ್ತ ದಿನಾಚರಣೆ ಅರ್ಥಪೂರ್ಣವಾಗಿಸಿ, ಎಡಿಸಿ ಸಿದ್ರಾಮೇಶ್ವರ ಸೂಚನೆ

adc koppal sidrameshwar meeting about anti drug day
ವ್ಯಸನಮುಕ್ತ ದಿನ ಅಂಗವಾಗಿ ಮಂಗಳವಾರ ಕೊಪ್ಪಳದಲ್ಲಿ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್​ ವಿಠ್ಠಲ ಚೌಗಲಾ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಡಿಎಸ್​ಒ ಡಾ.ನಂದಕುಮಾರ, ಆಯುಷ್​ ಅಧಿಕಾರಿ ಡಾ.ಪಿ.ಬಿ.ಹಿರೇಗೌಡರ್​ ಇದ್ದರು.
Published on

ಕೊಪ್ಪಳ: ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನ ಅಂಗವಾಗಿ ಆ.1ರಂದು ವ್ಯಸನಮುಕ್ತ ದಿನ ಆಚರಿಸುತ್ತಿದ್ದು, ಜಿಲ್ಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಎಡಿಸಿ ಸಿದ್ರಾಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ. ಕೊಪ್ಪಳದಲ್ಲಿ ಅಂದು ಬೆಳಗ್ಗೆ 10ಗಂಟೆಯಿಂದ ಜಾಥಾ ನಡೆಯಲಿದೆ. 11 ಗಂಟೆಗೆ ವೇದಿಕೆ ಕಾರ್ಯಕ್ರಮ ಇರಲಿದೆ. ಮಾದಕ ವಸ್ತು ಸೇವನೆ, ಅದರಿಂದಾಗುವ ಪರಿಣಾಮಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜಿಸಿ. ಮಕ್ಕಳು, ಯುವಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಪ್ರಬಂಧ ಏರ್ಪಡಿಸಿ. ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯಿಂದ ದೂರ ಉಳಿವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿ. ಶಿಕ್ಷಣಾಧಿಕಾರಿಗಳು ಈ ಬಗ್ಗೆ ನಿರ್ದೇಶನ ನೀಡಿ. ಸಾಹಿತಿಗಳಿಂದ ವಿಶೇಷ ಲೇಖನ ಬರೆಸಿ ಜಾಗೃತಿ ಮೂಡಿಸುವಂತೆ ವಾರ್ತಾಧಿಕಾರಿಗೆ ಸೂಚಿಸಿದರು.

ಶರಣ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ಜಿ.ಎಸ್​.ಗೋನಾಳ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಆಯೋಜಿಸಿ ಬಹುಮಾನ ವಿತರಿಸುವಂತೆ ಸಲಹೆ ನೀಡಿದರು. ತಹಸೀಲ್ದಾರ್​ಗಳಾದ ವಿಠ್ಠಲ ಚೌಗಲಾ, ಶೃತಿ, ಯು.ನಾಗರಾಜ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಡಿಎಸ್​ಒ ಡಾ.ನಂದಕುಮಾರ, ಆಯುಷ್​ ಅಧಿಕಾರಿ ಡಾ.ಪಿ.ಬಿ.ಹಿರೇಗೌಡರ್​, ಪತ್ರಕರ್ತ ಎಂ.ಸಾದಿಕ್​ ಅಲಿ, ಪ್ರಮುಖರಾದ ಡಾ.ಸಂಗಮೇಶ ಕಲಹಾಳ, ಶರಣಬಸನಗೌಡ ಪಾಟೀಲ್​, ಅರ್ಚನಾ ಸಸಿಮಠ, ವೀರಭದ್ರಪ್ಪ ನಂದ್ಯಾಲ, ಎಂ.ಎಸ್​.ನೀಲಕಂಠಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net