ಅಲ್ಪಸಂಖ್ಯಾತರಿಗೆ ಇಲಾಖೆವಾರು ಸೌಲಭ್ಯ ಒದಗಿಸಿ

Published on

ಕೊಪ್ಪಳ: ಪ್ರಧಾನ ಮಂತ್ರಿ ಹೊಸ ೧೫ ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರಿಗೆ ಇಲಾಖೆವಾರು ಸೌಲಭ್ಯ ಕಲ್ಪಿಸುವಂತೆ ಎಡಿಸಿ ಸಾವಿತ್ರಿ ಕಡಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಹೊಸ ೧೫ ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಮುಸ್ಲಿಂ, ಜೈನ್, ಸಿಖ್, ಪಾರ್ಸಿ, ಬೌದ್ಧ ಸಮುದಾಯಗಳ ಅಬಿವೃದ್ಧಿಗೆ ಕಾರ್ಯಕ್ರಮ ಯೋಜಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ. ಅವರಿಗಾಗಿ ಮೀಸಲಿಟ್ಟ ಗುರಿ ಸಾಧಿಸಿ. ನಿವೇಶನ, ಮನೆ ಹಂಚಿಕೆ, ಗಂಗಾಕಲ್ಯಾಣ, ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಇತರ ಯೋಜನೆಗಳಲ್ಲಿ ಅರ್ಹರನ್ನು ಗುರುತಿಸಿ. ವಿವಿಧ ಸೌಲಭ್ಯ ಕೋರಿ ಸಲ್ಲಿಸುವ ಅರ್ಜಿ ಪರಿಶೀಲಿಸಿ ನಿಯಮಾನುಸಾರ ಸೌಲಭ್ಯ ನೀಡಿ. ನಿರ್ಲಕ್ಷ್ಯ ಮಾಡದೇ ಸರಿಯಾಗಿ ಯೋಜನೆ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಅಲ್ಪಸಂಖ್ಯಾತರ ಜಿಲ್ಲಾ ಕಲ್ಯಾಣಾಧಿಕಾರಿ ಸುರೇಶ ಕೋಕರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಿಒ ಗಂಗಪ್ಪ ಇತರರಿದದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net