ವಾರದಲ್ಲಿ 2 ದಿನ ಎಡಿಸಿ ಕೋರ್ಟ್ ಕಲಾಪ

ort-order.
Published on

ಮೈಸೂರು: ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಇನ್ನು ಮುಂದೆ ಅಪರ ಜಿಲ್ಲಾಧಿಕಾರಿ ನ್ಯಾಯಾಲಯ ಕಲಾಪಗಳು ವಾರದಲ್ಲಿ ಎರಡು ದಿನ ನಡೆಯಲಿವೆ. ಇದರಿಂದ ಹಳೆಯ ಪ್ರಕರಣಗಳ ಶೀಘ್ರ ವಿಲೇವಾರಿ ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಹೇಳಿದ್ದಾರೆ.

ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕಂದಾಯ ನ್ಯಾಯಾಲಯದಲ್ಲಿ ಬಾಕಿ ಇರುವ ಹಳೆಯ ಪ್ರಕರಣಗಳನ್ನು ಶೀಘ್ರ ವಿಲೇವಾರಿಯ ಉದ್ದೇಶದಿಂದ ಇನ್ನು ಮುಂದೆ ವಾರಕ್ಕೆ ಎರಡು ದಿನ ನ್ಯಾಯಾಲಯದ ಕಲಾಪವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಮಂಗಳವಾರ ಮಾತ್ರ ನಡೆಯುತ್ತಿದ್ದ ನ್ಯಾಯಾಲಯ ಕಲಾಪದ ಜತೆಗೆ ಇನ್ನು ಮುಂದೆ ಪ್ರತಿ ಶುಕ್ರವಾರವೂ ಅಪರ ಜಿಲ್ಲಾಧಿಕಾರಿ ನ್ಯಾಯಾಲಯ ಕಲಾಪವನ್ನು ನಡೆಸಲಾಗುವುದು. ಇದರ ಸದುಪಯೋಗವನ್ನು ರೈತರು ಹಾಗೂ ವಕೀಲರು ಬಳಸಿಕೊಂಡು ತಮಗೆ ಅನುಕೂಲವಾದ ದಿನಾಂಕಗಳನ್ನು ಕೋರಿ ಕಲಾಪದಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net