ಎಡಿಸಿ, ಸಹಾಯಕ ಆಯುಕ್ತೆ ವರ್ಗಾವಣೆ

ADC KR Duragesh
Published on

ರಾಯಚೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಸಹಾಯಕ ಆಯುಕ್ತೆ ಮಹೆಬೂಬಿ, ನಗರಾಭಿವೃದ್ಧಿ ಪ್ರಾಕಾರದ ಆಯುಕ್ತ ಮಹೆಬೂಬ್ ಜಿಲಾನಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಆರ್‌ಡಿಎ ಆಯುಕ್ತ ಮಹೆಬೂಬ್ ಜಿಲಾನಿಯನ್ನು ಕಲಬುರಗಿ ಮಹಾನಗರ ಪಾಲಿಕೆ ಪರಿಷತ್ ಕಾರ್ಯದರ್ಶಿ ಸ್ಥಾನಕ್ಕೆ, ಸಹಾಯಕ ಆಯುಕ್ತೆ ಮಹೆಬೂಬಿಯನ್ನು ಚಿಕ್ಕೋಡಿಯ ಉಪ ವಿಭಾಗಾಕಾರಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದ್ದು, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶಗೆ ಇನ್ನೂ ಯಾವುದೇ ಸ್ಥಾನವನ್ನು ತೋರಿಸಿಲ್ಲ.
ಜಿಲ್ಲೆಯ ಅಪರ ಜಿಲ್ಲಾಕಾರಿ ಸ್ಥಾನಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅಶೋಕ ದುಡಗುಂಟಿ, ಆರ್‌ಡಿಎ ಆಯುಕ್ತರನ್ನಾಗಿ ಕಲಬುರಗಿ ಮಹಾನಗರ ಪಾಲಿಕೆ ಪರಿಷತ್ ಕಾರ್ಯದರ್ಶಿಯಾಗಿದ್ದ ಮಲ್ಲೇಶ ತಂಗಾ, ಸಹಾಯಕ ಆಯುಕ್ತರನ್ನಾಗಿ ಬೆಳಗಾವಿ ಮಹಾನಗರ ಪಾಲಿಕೆ ಉಪ ವಿಭಾಗಾಕಾರಿಯಾಗಿದ್ದ ಎಸ್.ಎಸ್.ಸಂಪಗಾವಿಯನ್ನು ವರ್ಗಾವಣೆಗೊಳಿಸಿ ಸರ್ಕಾರದ ಅೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net