ಅಡವಿಸೋಮಾಪೂರ ಸಣ್ಣ ತಾಂಡೆ

IMG-20240531-WA0011
Published on

ಅಡವಿಸೋಮಾಪೂರ: ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಡವಿಸೋಮಾಪೂರ ಸಣ್ಣ ತಾಂಡೆ ಶಾಲೆಯಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಂಡು ಅವರಿಗೆ ಇಲಾಖೆ ನೀಡಿದ ಉಚಿತವಾಗಿ ಪಠ್ಯ ಪುಸ್ತಕ, ಎರಡು ಜೊತೆ ಸಮವಸ್ತ್ರ, ಲೇಖನಿ ಸಾಮಗ್ರಿ ಹೂವು, ಸಿಹಿ ನೀಡಿ ಶಾಲಾ ಪ್ರಾರಂಭೋತ್ಸವಕ್ಕೆ ಎಸ್ ಡಿ ಎಂ ಸಿ ಅಧ್ಯಕ್ಷ ಮಾರುತಿ ಪವಾರ ಅದ್ಧೂರಿಯಾಗಿ ಚಾಲನೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶ ಡಿ ಎಚ್ ಮಾತನಾಡಿ ನಮ್ಮ ಶಾಲೆಯಲ್ಲಿ ಉಚಿತವಾಗಿ ಕ್ಷೀರಭಾಗ್ಯ, ರಾಗಿ ಮಾಲ್ಟ್, ಮಧ್ಯಾಹ್ನದ ಬಿಸಿಯೂಟ, ಪಠ್ಯ ಪುಸ್ತಕ, ಸಮವಸ್ತ್ರ, ಶೂ ಸಾಕ್ಸ್ ನೀಡಿ ಅದರ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಆದ್ದರಿಂದ ತಮ್ಮ ಮಕ್ಕಳನ್ನು ತಪ್ಪದೇ ನಮ್ಮ ಶಾಲೆಗೆ ದಾಖಲು ಮಾಡಲು ಪಾಲಕರಿಗೆ ಕರೆ ನೀಡಿದರು.

ಶಾಲೆಯ ಶಿಕ್ಷಕರಾದ ಎಸ್ ಜಿ ಅಮ್ಮಿನಭಾವಿ ಅವರು ಮಕ್ಕಳ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು. ಪಿ ಬಿ ಕಿಲಬನವರ, ಎಸ್ ಟಿ ಹಳಕಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ಮಾರುತಿ ಪವಾರ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಲಮಾಣಿ. ಲಕ್ಷ್ಮಣ ಲಮಾಣಿ, ಸೋಮನಾಥ ಲಮಾಣಿ, ಥಾವರೆಪ್ಪ ಪವಾರ, ಕಳಕಪ್ಪ ಚವ್ಹಾಣ, ಬಿಸಿಯೂಟ ಸಿಬ್ಬಂದಿಗಳಾದ ಗಂಗವ್ವ ಲಮಾಣಿ, ಸವಿತಾ ಪವಾರ, ದೇವಲೆಪ್ಪ ಲಮಾಣಿ, ರೇವಪ್ಪ ಲಮಾಣಿ, ಉಮೇಶ ಲಮಾಣಿ,ಸೋಮನಾಥ ರಾಠೋಡ, ಸೀತವ್ವ ಲಮಾಣಿ,ಸಾವಿತ್ರಿ ರಾಠೋಡ, ದೇವಕ್ಕ ಲಮಾಣಿ, ಲಕ್ಷ್ಮಿ ಲಮಾಣಿ,ಮೀರವ್ವ ಪವಾರ, ಶಾಂತವ್ವ ರಾಠೋಡ, ರೇಣುಕಾ ಲಮಾಣಿ, ಗೀತಾ ರಾಠೋಡ,ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net