

ಮೂಡಲಗಿ: ಪ್ರವಚನ, ಆಧ್ಯಾತ್ಮಿಕ ಚಟುವಟಿಕೆ ಮೂಲಕ ಮನುಷ್ಯನ ಸ್ವಭಾವ
ಸಕಾರಾತ್ಮಕವಾಗಿ ತಿದ್ದಬಹುದು ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಶಿವಾಪುರ (ಹ) ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಡವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದು ಅಂಕಲಗಿ ಮಠದ ಅಡವಿಸಿದ್ಧೇಶ್ವರ ಸ್ವಾಮೀಜಿ ನಡೆದಾಡಿದ ಪುಣ್ಯೇತ್ರ. ಮಠ&ಮಂದಿರಗಳು ಸಂಸತಿ ಕಲಿಸುವಂತಹ ಕೇಂದ್ರಗಳಾಗಿವೆ ಎಂದರು.
ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಅನ್ನದಾನೇಶ್ವರ ಸ್ವಾಮೀಜಿ ಹಾಗೂ ಮಠದ ಅಡವಿಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಗಾಳೇಶ್ವರ ಮಠದ ವೆಂಕಟೇಶ್ವರ ಮಹಾರಾಜರು, ರೇವಣಸಿದ್ಧೇಶ್ವರ ಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಶಂಕರಗೌಡ ಪಾಟೀಲ, ವೆಂಕಣ್ಣ ಕೇದಾರಿ, ಕೆಂಪಣ್ಣ ಮುಧೋಳ, ಶ್ರೀಕಾಂತ ಕೌಜಲಗಿ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ಈಶ್ವರ ಗಾಡವಿ, ಮಹಾಂತೇಶ ಕುಡಚಿ, ಉಮೇಶ ಮುಧೋಳ, ಪರಪ್ಪ ಗಿರೆಣ್ಣವರ ಇತರರಿದ್ದರು.