ಆದರ್ಶ ಸಹಕಾರ ಸಂಘಕ್ಕೆ ೫ನೇ ಬಾರಿ ಪ್ರಶಸ್ತಿ- ಇಂದು ಎಸ್‌ಸಿಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಪ್ರದಾನ

Published on


ಪುತ್ತೂರು: ಸುಳ್ಯ, ಕಡಬ, ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ೧೪ ಶಾಖೆಗಳನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ದರ್ಬೆ ಪುತ್ತೂರು ೨೦೨೩-೨೪ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ೫ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಬುಧವಾರ ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆಯುವ ಮಹಾಸಭೆಯಲ್ಲಿ ಪ್ರಶಸ್ತಿ ಸ್ವೀಕರಿಸಲಿದೆ.


ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ೨೦೦೨ರಲ್ಲಿ ಸ್ಥಾಪನೆಗೊಂಡು ಆರಂಭದಿಂದಲೂ ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ತರಗತಿ ಪಡೆದುಕೊಂಡು ಬರುತ್ತಿದೆ. ೨೦೨೩-೨೪ನೇ ಸಾಲಿನಲ್ಲಿ ೭೩೬.೬೩ ಕೋಟಿ ವ್ಯವಹಾರ ಮಾಡಿ, ರೂ.೧.೬೫ ಕೋಟಿ ನಿವ್ವಳ ಲಾಭ ಗಳಿಸಿದೆ. ಮಾರ್ಚ್ ೨೦೨೪ರ ಅಂತ್ಯಕ್ಕೆ ೮೫೨೪ ಸದಸ್ಯರನ್ನು ಹೊಂದಿದ್ದು, ರೂ. ೩.೨೨ ಕೋಟಿ ಪಾಲು ಬಂಡವಾಳ, ೧೩೧.೯೨ ಕೋಟಿ ಠೇವಣಿ ಮತ್ತು ರೂ.೧೦೯.೬೯ ಕೋಟಿ ಹೊರಬಾಕಿ ಸಾಲವನ್ನು ಹೊಂದಿದೆ. ಸಂಘ ಆರಂಭಗೊಂಡ ವರ್ಷದಿಂದ ಸತತವಾಗಿ ಶೇ.೧೦ಕ್ಕಿಂತ ಮೇಲಿನ ಡಿವಿಡೆಂಡನ್ನು ನೀಡಿದ ಏಕೈಕ ಸಂಘವಾಗಿದೆ. ಪ್ರಸ್ತುತ ಸಂಘದಲ್ಲಿ ೩.೮೭ ಕೋಟಿಯಷ್ಟು ವಿವಿಧ ರೀತಿಯ ನಿಽಗಳಿವೆ.


ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡವನ್ನು ನಿರ್ಮಿಸುವ ಉದ್ದೇಶದಿಂದ ಕಡಬ ತಾಲೂಕಿನ ಸವಣೂರು ಗ್ರಾಮದಲ್ಲಿ ೦.೭೫ ಸೆಂಟ್ಸ್ ಪರಿವರ್ತಿತ ಭೂಮಿಯನ್ನು ಒಟ್ಟು ೧,೨೮,೯೯,೧೧೦ ರೂ.ಗೆ ಖರೀದಿ ಮಾಡಿದ್ದು, ಇಲ್ಲಿ ಕಟ್ಟಡ ನಿರ್ಮಿಸಲು ಶಂಕು ಸ್ಥಾಪನೆ ೨೦೨೩ರ ಅಕ್ಟೋಬರ್ ೧೫ರಂದು ನಡೆದಿದೆ. ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಸಂಘಕ್ಕೆ ೨೫ ವರ್ಷ ಪೂರೈಸುವುದರೊಳಗೆ ಕಟ್ಟಡ ಲೋಕಾರ್ಪಣೆ ಮಾಡಲಾಗುವುದು.


ವಿದ್ಯಾರ್ಥಿಗಳಿಗೆ ಧನ ಸಹಾಯ
ಸಂಘ ತನ್ನ ಎಲ್ಲಾ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ೫ರಿಂದ ೧೦ನೇ ತರಗತಿಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆ ನಿಽಯಿಂದ ಸಹಾಯಧನವನ್ನು ಮಹಾಸಭೆಯ ದಿನದಂದು ನೀಡಿಕೊಂಡು ಬರುತ್ತಿದ್ದು, ಈವರೆಗೆ ೨೧,೭೩,೦೦೦ ರೂ.ಮೊತ್ತವನ್ನು ೧೦೬೭ ವಿದ್ಯಾರ್ಥಿಗಳಿಗೆ ವಿತರಿಸಿದೆ. ಈ ವರ್ಷವೂ ಆ.೨೪ರಂದು ನಡೆಯುವ ೨೦೨೩-೨೪ನೇ ಸಾಲಿನ ಮಹಾಸಭೆಯಲ್ಲಿ ತಲಾ ೨,೦೦೦ ರೂ.ನಂತೆ ೨೫೦ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲಿದೆ.


ಸಂಘಕ್ಕೆ ೫ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಸಂಘದ ಸಾಧನೆಗೆ ಮತ್ತು ಅಭಿವೃದ್ದಿಗೆ ಸಹಕಾರ ನೀಡುತ್ತಿರುವ ನಿರ್ದೇಶಕರಿಗೆ, ಸದಸ್ಯರಿಗೆ, ಠೇವಣಿದಾರರಿಗೆ, ಗ್ರಾಹಕರಿಗೆ ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷರಿಗೆ, ಅಽಕಾರಿ ವರ್ಗದವರಿಗೆ ಮತ್ತು ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳು.
| ಸಹಕಾರ ರತ್ನ ಕೆ. ಸೀತಾರಾಮ ರೈ ಸವಣೂರು
ಅಧ್ಯಕ್ಷರು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net