ಆದರ್ಶ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

udp-1-adarsha
Published on

ಉಡುಪಿ: ದಾದಿಯರು ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಆದರ್ಶ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ.ಜಿ. ಎಸ್​. ಚಂದ್ರಶೇಖರ್​ ಹೇಳಿದರು.

ಆದರ್ಶ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯಲ್ಲಿ ಮಾತನಾಡಿದರು. ಪ್ರಸೂತಿ ತಜ್ಞೆ ಡಾ. ರಂಜಿತಾ ಎಸ್​. ನಾಯಕ್​ ಉದ್ಘಾಟಿಸಿದರು. ಆದರ್ಶ ಕಾಲೇಜ್​ ಆಫ್​ ನರ್ಸಿಂಗ್​ ನ ಉಪ ಪ್ರಾಂಶುಪಾಲೆ ಯಶೋದಾ, ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್​, ಕೀಲು ಮತ್ತು ಮೂಳೆ ತಜ್ಞರಾದ ಡಾ. ಮೋಹನ್​ ದಾಸ್​ ಶೆಟ್ಟಿ, ಜನರಲ್​ ಸರ್ಜನ್​ ಡಾ. ಪ್ರಶಾಂತ್​ ಶೆಟ್ಟಿ, ಹಿರಿಯ ವೈದ್ಯ ಡಾ. ಅಶೋಕ್​ ಕುಮಾರ್​ ವೈ. ಜಿ ಉಪಸ್ಥಿತರಿದ್ದರು. ಆದರ್ಶ ಆಸ್ಪತ್ರೆಗೆ ಹೊಸದಾಗಿ ಸೇರ್ಪಡೆಗೊಂಡ ನರ್ಸಿಂಗ್​ ಮೇಲ್ವಿಚಾರಕಿ ನಾಗವೇಣಿ ಅವರನ್ನು ಸ್ವಾಗತಿಸಲಾಯಿತು. ಸಿಸ್ಟೆರ್​ ಶೈಲಾ ಸ್ವಾಗತಿಸಿ, ಸಿಸ್ಟರ್​ ಮನಿಷಾ ವಂದಿಸಿದರು. ಡಯಟಿಷಿಯನ್​ ಅನುಶ್ರೀ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net