ಅಡರಕಟ್ಟಿ ಗ್ರಾಪಂ ಅಧ್ಯಕ್ಷೆ ಪ್ರೇಮಕ್ಕ

Adarakatti
Published on

ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಪಂ ಅಧ್ಯಕ್ಷೆಯಾಗಿ ಪ್ರೇಮಕ್ಕ ಮಾನಪ್ಪ ಲಮಾಣಿ, ಉಪಾಧ್ಯಕ್ಷೆಯಾಗಿ ಕಾಶವ್ವ ಆರ್ ದೊಡ್ಡಮನಿ ಆಯ್ಕೆಯಾದರು.

ಒಟ್ಟು 11 ಸದಸ್ಯರನ್ನೊಳಗೊಂಡ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿತ್ತು. ಚುನಾವಣೆ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪವಿತ್ರ ಎಂ ಗಡೆಪ್ಪನವರ, ಪ್ರೇಮಕ್ಕ ಲಮಾಣಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಶವ್ವ ದೊಡ್ಡಮನಿ, ಕಮಲವ್ವ ಲಮಾಣಿ ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆಯಲ್ಲಿ ಓರ್ವ ಸದಸ್ಯರು ಗೈರಾಗಿದ್ದರಿಂದ ಇಬ್ಬರಿಗೂ ತಲಾ 5 ಮತಗಳು ಚಲಾವಣೆಯಾಗಿದ್ದವು. ಚೀಟಿ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರನ್ನ ಆಯ್ಕೆ ಮಾಡಲಾಯಿತು.

ಎ.ಪಿ. ಸುಗಂಧಿ ಚುನಾವಣಾಧಿಕಾರಿಯಾಗಿದ್ದರು. ಸದಸ್ಯರಾದ ನಿಂಗಪ್ಪ ಪ್ಯಾಟಿ, ಸೋಮಣ್ಣ ಹವಳದ, ಹರೀಶ ಲಮಾಣಿ, ಲಕ್ಷ್ಮೀ ಕಾರಬಾರಿ, ಸೋಮಪ್ಪ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net