

ಅಳವಂಡಿ: ಮುಂಗಾರು ಮಳೆ ಚುರುಕುಪಡೆದುಕೊಂಡಿದ್ದು, ಬಾಡುತ್ತಿದ್ದ ಬೆಳೆಗೆ ಜೀವಕಳೆ ತಂದಿದೆ.
ಅಳವಂಡಿ ವಲಯದ ಬಹುತೇಕ ಗ್ರಾಮಗಳಲ್ಲಿ ಪುನರ್ವಸು ಮಳೆ ಗುರುವಾರದಿಂದ ಸುರಿಯುತ್ತಿದ್ದು ರೈತ ಖುಷಿಗೊಂಡಿದ್ದಾನೆ. ಶುಕ್ರವಾರ ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ ಸಂಜೆವರೆಗೂ ಮುಂದುವರೆದಿತು.
ಪ್ರಸಕ್ತ ವರ್ಷದಲ್ಲಿ ಮುಂಗಾರು ಪೂರ್ವ ಮಳೆ ಆರಂಭದಲ್ಲಿ ಚನ್ನಾಗಿ ಆಗಿತ್ತು. ಇದರಿಂದ ಖುಷಿಗೊಂಡ ರೈತ ಖುಷಿಯಿಂದ ಮುಂಗಾರು ಬಿತ್ತನೆ ಕಾರ್ಯ ಮಾಡಿದ್ದರು. ಮೆಕ್ಕೆಜೋಳ, ಹೆಸರು, ಸೂರ್ಯಕಾಂತಿ, ತೊಗರಿ ಮುಂತಾದ ಬೆಳೆಯನ್ನು ಬಿತ್ತಿದ್ದರು. ಆದರೆ ಬಿತ್ತಿದ ನಂತರ ಕಳೆದ ಒಂದು ತಿಂಗಳಿಂದ ಮಳೆ ಸುರಿದಿರಲಿಲ್ಲ. ಮಳೆಗಾಗಿ ರೈತರು ಮೋಡದತ್ತ ಮುಖ ಮಾಡಿದ್ದರು. ಈಗ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆ ಗರಿಗೆದರಿವೆ.