ದೇಶವನ್ನು ಕುಷ್ಠರೋಗ ಮುಕ್ತ ಮಾಡಲು ಸಹಕರಿಸಿ

Untitled design(20)
Published on

ಅಳವಂಡಿ: ಎಲ್ಲರೂ ಒಟ್ಟಾಗಿ ಕುಷ್ಠರೋಗದ ಕುರಿತು ಜಾಗೃತಿ ಮೂಡಿಸೋಣ ಎಂದು ವೈದ್ಯಾಧಿಕಾರಿ ಚಂದ್ರಶೇಖರ ಮೇಟಿ ಹೇಳಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಂ ಇಲಾಖೆ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳ ಕಾರ್ಯಾಲಯ ಕೊಪ್ಪಳವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.

ದೇಹದ ಯಾವುದೇ ಭಾಗದಲ್ಲಿ ತಾಮ್ರ ಅಥವಾ ಬಿಳಿ ಬಣ್ಣದ ಮಚ್ಚೆ ಇದ್ದು ಸ್ಪರ್ಶಜ್ಞಾನ ಇಲ್ಲದೇ ಇದ್ದಲ್ಲಿ ಪರೀಕ್ಷೆ ಒಳಪಡಬೇಕು. ಪಾದಗಳು, ಬೆರಳುಗಳು ದೌರ್ಬಲ್ಯ ಹೊಂದಿದ್ದಲ್ಲಿ ಹಾಗೂ ಕಣ್ಣುಗಳು ಮುಚ್ಚುವಲ್ಲಿ ತೊಂದರೆಯಾಗುವುದು, ನಡೆಯುವಾಗ ಕಾಲು ಎಳೆಯುವುದು ಕಂಡುಬಂದಲ್ಲಿ ಜಾಗೃತಿ ವಹಿಸುವುದು ಅಗತ್ಯ ಎಂದರು.

ಕುಷ್ಠರೋಗದ ಬಗ್ಗೆ ತಪ್ಪು ಕಲ್ಪನೆ ಬೇಡ. ದೇಶವನ್ನು ಕುಷ್ಠರೋಗ ಮುಕ್ತ ಮಾಡುವ ದಿಶೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆಯೊಂದಿಗೆ ಸಹಕರಿಸಿ. ರೋಗದ ಪತ್ತೆ ಪರೀಕ್ಷೆ ಹಾಗೂ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ. ಎಮ್‌ಡಿಟಿ ಬಹುವಿಧ ಔಷಧಿಯಿಂದ ಕುಷ್ಠರೋಗ ಮುಕ್ತವಾಗಲಿದೆ ಎಂದರು. ನಂತರ ಕುಷ್ಠರೋಗ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಪಾರ್ಮಸಿ ಅಧಿಕಾರಿ ಚನ್ನವೀರಯ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವೀಂದ್ರ ಕಮ್ಮಾರ, ಬಸಪ್ಪ ಗಾಳಿ, ಆರೋಗ್ಯ ಸುರಕ್ಷತಾಧಿಕಾರಿ ಸಾವಿತ್ರಿ ಹಂಚಿನಾಳ, ಆಶಾಗಳಾದ ರಾಧಾಭಾಯಿ, ಜಾನಕಿ, ಸಿಬ್ಬಂದಿ ಸೌಮ್ಯಾ, ಕಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net