ಕೆಸಿಸಿಐ ನೂತನ ಅಧ್ಯಕ್ಷರಾಗಿ ಆದಪ್ಪಗೌಡರ ಆಯ್ಕೆ

New Adappagaudra new
Published on

ಹುಬ್ಬಳ್ಳಿ : ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ನೂತನ ಅಧ್ಯಕ್ಷರಾಗಿ ಗದಗನ ಜಿ.ಕೆ. ಆದಪ್ಪಗೌಡರ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ನಡೆದ 96ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2025-26 ಹಾಗೂ 2026-27ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.

ಮೊದಲ ಉಪಾಧ್ಯಕ್ಷರಾಗಿ ಹುಬ್ಬಳ್ಳಿಯ ಪ್ರವೀಣ ಅಗಡಿ, ಎರಡನೇ ಉಪಾಧ್ಯಕ್ಷರಾಗಿ ಎಸ್. ಜಿ. ಕಮ್ಮಾರ, ಮೂರನೇ ಉಪಾಧ್ಯಕ್ಷರಾಗಿ ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿಯಾಗಿ ಉದಯ ರೇವಣಕರ, ಜೊತೆ ಗೌರವ ಕಾರ್ಯದರ್ಶಿಯಾಗಿ ಪ್ರಕಾಶ ಶೃಂಗೇರಿ ಆಯ್ಕೆಗೊಂಡಿದ್ದಾರೆ.

ಮೂರು ವರ್ಷಗಳ ಅವಧಿಗೆ (2025-2026, 2026-2027 ಹಾಗೂ 2027-2028 ನೇ ಸಾಲಿಗೆ) ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರು: </p><p>ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕ್ಷೇತ್ರದಿಂದ ಕಾಂತಿಲಾಲ ಪುರೋಹಿತ, ಅಶೋಕ ಲದವಾ, ಗಂಗನಗೌಡ ಪಾಟೀಲ, ಗಿರಿಧರಲಾಲ ಬಾಫನಾ, ಶಶಿಧರ ಶೆಟ್ಟರ , ನೀಲಕಂಠಪ್ಪ ಹಂಪಣ್ಣವರ, ರಮೇಶ ಯಾದವಾಡ, ಸುಭಾಸ ಬಾಗಲಕೋಟಿ, ಮಲ್ಲಿಕಾರ್ಜುನ ಕಂಬಳ್ಯಾಳ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊರತುಪಡಿಸಿ (ಹೊರಗಿನ ಭಾಗ) ಗದಗನ ಮುರುಘರಾಜೇಂದ್ರ ಬಡ್ನಿ, ಹೊನ್ನಾವರದ ಮಂಜುನಾಥ ಹೆಗಡೆ, ಬೆಳಗಾವಿಯ ಬಸವರಾಜ ಜವಳಿ, ಬ್ಯಾಡಗಿಯ ರಾಜಶೇಖರ ಮಾಗನೂರ, ಹೊಸಪೇಟೆಯ ಗುರುಸಿದ್ದೇಶ ಕೋತಂಬ್ರಿ, ಬಾಗಲಕೋಟದ ರವಿ ಕುಮತಗಿ ಆಯ್ಕೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಈ ಬಾರಿಯೂ ಪದಾಧಿಕಾರಿಗಳನ್ನು ಹಾಗೂ ಆಡಳಿತ ಮಂಡಳಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.

ಚುನಾವಣೆ ಹೆಸರಿನಲ್ಲಿ ಸದಸ್ಯರಲ್ಲಿ ವೈಮನಸ್ಸು ಮೂಡಲು ಆಸ್ಪದ ನೀಡದೇ ಒಗ್ಗಟ್ಟು ಪ್ರದರ್ಶಿಸುವುದು ಸಂಸ್ಥೆಯ ಶಕ್ತಿಯ ಮೂಲ ಎಂದು ಹೇಳಿದರು.

ನೂತನ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಮಾಜಿ ಅಧ್ಯಕ್ಷರಾದ ಎಂ.ಸಿ. ಹಿರೇಮಠ, ವಿ.ಪಿ. ಲಿಂಗನಗೌಡರ, ರಮೇಶ ಪಾಟೀಲ, ವಿನಯ ಜವಳಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net