

ಕಿನ್ನಿಗೋಳಿಯ ಎಳತ್ತೂರು ಅಂಗನವಾಡಿ ಕೇಂದ್ರದಲ್ಲಿ ಅದಾನಿ ಫೌಂಡೇಶನ್ ಹಾಗೂ ದಕ್ಷಿಣ ಕನ್ನಡ ಜಿ.ಪಂ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವತಿಯಿಂದ ಸಮುದಾಯ ಆಧಾರಿತ ಕಾರ್ಯಕ್ರಮ ನಡೆಯಿತು.
ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದಾನಿ ಪೌಂಡೇಶನ್ ಸುಪೋಷನ್ ಅಧಿಕಾರಿ ಪ್ರೇಮಾ ಡಿಸೋಜ, ಮೂಲ್ಕಿ ವಲಯ ಮೇಲ್ವಿಚಾರಕಿ ಸುಲೋಚನಾ, ಎಳತ್ತೂರು ಸಮುದಾಯ ಆರೋಗ್ಯಾಧಿಕಾರಿ ಅಶ್ವಿತ, ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಲೀಲಾ, ಗುತ್ತಕಾಡು ಅಂಗನವಾಡಿ ಪ್ರಭಾರ ಕಾರ್ಯಕರ್ತೆ ಶಾಂತಿ ಬಿ. ಮೊದಲಾದವರು ಉಪಸ್ಥಿತರಿದ್ದರು.