

ಉಡುಪಿ: ಯಕ್ಷಗಾನ ಪ್ರಾಚೀನತೆ ಉಳಿಸಿಕೊಂಡು ನವೀನತೆಯತ್ತ ಸಾಗುತ್ತಿದೆ. ಪುರಾಣದ ಕಥೆಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಪಾಠಶಾಲೆಯಾಗಿದೆ. ಹೀಗಾಗಿ ಯಕ್ಷಗಾನ ಪಾತ್ರಧಾರಿಗಳು ಮಹತ್ತರ ಜವಾಬ್ದಾರಿ ಹೊಂದಿದ್ದು, ಉನ್ನತ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಭಾನುವಾರ ಪುರಭವನದಲ್ಲಿ ಯಾಜಿ ಯಕ್ಷಯಜ್ಞಕ್ಕೆ ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ, ಋಣಸಂದಾಯ, ಯಕ್ಷಗಾನ ಪ್ರದರ್ಶನ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷ್ಣಯಾಜಿಯಂತಹ ಶ್ರೇಷ್ಠ ಸಾಧಕರು ಯಕ್ಷಗಾನದ ಮೂಲಕ ಸಮಾಜವನ್ನು ಆಧ್ಯಾತ್ಮಿಕತೆಯ ತೆಗೆದುಕೊಂಡು ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ , ಕೃಷ್ಣಯಾಜಿ ಬಳ್ಕೂರು ತಮ್ಮ ಕಠಿಣ ಪರಿಶ್ರಮದ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಯುವ ಕಲಾವಿದರಿಗೆ ಮಾದರಿಯಾಗಿದ್ದಾರೆ. ಶ್ರದ್ಧೆಯ ಪಾತ್ರ ಪೋಷಣೆ, ಭಾವನಾತ್ಮಕ ಭಾಷಾ ಪ್ರಯೋಗವನ್ನು ಮಾಡುವಲ್ಲಿ ಕೃಷ್ಣಯಾಜಿ ಅಗ್ರಮಾನ್ಯ ಎಂದರು.
ಜಿ.ಶಂಕರ್ ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ. ಜಿ.ಎಸ್. ಶಂಕರ್ ಕೃಷ್ಣಯಾಜಿ ಅವರಿಗೆ ಚೆಕ್ ಹಸ್ತಾಂತರಿಸಿದರು. ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿದರು. ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ, ಉದ್ಯಮಿ ಪುರುಷೋತ್ತಮ್ ಪಿ. ಶೆಟ್ಟಿ, ನಿರಂಜನ್ ಜೈನ್ ಬೆಂಗಳೂರು, ಮಣಿಪಾಲ ಸಹಕುಲಪತಿ ಡಾ. ನಾರಾಯಣ ಸಭಾಹಿತ್, ಭುವನ್‌ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು. ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೃಷ್ಣಯಾಜಿ ಬಳ್ಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ್ ಶರ್ಮಾ ಬಾರಕೂರು ನಿರೂಪಿಸಿದರು.