

ಪಡುಬಿದ್ರಿ: ನಮ್ಮ ಸಂಪತ್ತಿನ ಸ್ವಲ್ಪ ಭಾಗ ದೇಶ, ದೇಹ, ದೇವರಿಗಾಗಿ ಮೀಸಲಿಡಬೇಕು. ಇದುವೇ ನಮ್ಮಲ್ಲಿನ ತ್ರಿವೇಣಿ ಸಂಗಮ ಎಂದು ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಶುಕ್ರವಾರ ಆಗಮಿಸಿ ಶ್ರೀ ಜ್ಞಾನಮಂದಿರದಲ್ಲಿ ಮಾಲಿಕೆ ಮಂಗಳಾರತಿ ಸ್ವೀಕರಿಸಿ, ಆಶೀರ್ವಚಿಸಿದರು.
ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ತೆರಳಿದ ಶ್ರೀಪಾದರು ಢಕ್ಕೆಬಲಿ ಸಂದರ್ಭದ ತಂಬಿಲ ಸೇವೆ ವೀಕ್ಷಿಸಿ ಪ್ರಥಮ ಪ್ರಸಾದ ಸ್ವೀಕರಿಸಿದರು. ಶ್ರೀ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಗುರಿಕಾರ ಪದ್ಮನಾಭ ಕೊರ್ನಾಯ ಶ್ರೀಪಾದರನ್ನು ಸ್ವಾಗತಿಸಿದರು. ಸೇವಾಕರ್ತ ಪಿ.ಜನಾರ್ದನ ರಾವ್ ದಂಪತಿ ಮಾಲಿಕೆ ಮಂಗಳಾರತಿ ನೆರವೇರಿಸಿದರು. ಅರ್ಚಕರಾದ ನಂದಕುಮಾರ್ ಆಚಾರ್ಯ, ರಘುಪತಿ ಆಚಾರ್ಯ, ಪಾತ್ರಿಗಳಾದ ಸುರೇಶ್ ರಾವ್, ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ಗುರಿಕಾರರಾದ ಬಾಲಪ್ಪ ನಟರಾಜ ಪಿ.ಎಸ್., ಮುರುಡಿ ಜಗದೀಶ್ ರಾವ್, ಶ್ರೀ ವನದುರ್ಗಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್, ಕೋಶಾಧಿಕಾರಿ ವೈ.ಸುರೇಶ್ ರಾವ್, ಟ್ರಸ್ಟಿಗಳಾದ ಶ್ರೀನಿವಾಸ ರಾವ್, ಪಿ.ಎಸ್. ರಾಘವೇಂದ್ರ ರಾವ್, ರವೀಂದ್ರನಾಥ್ ಪಿ.ಎಚ್. ಮತ್ತಿತರರಿದ್ದರು.