ಶ್ರೀಕೃಷ್ಣ ಜಯಂತ್ಯಂಗ ಅಷ್ಟೋತ್ಸವಕ್ಕೆ ಚಾಲನೆ; ಆರತಿ ಉಪನ್ಯಾಸ

ಸುಗುನ
Published on

ಬೆಂಗಳೂರು: ಬಾಲ್ಯದಲ್ಲಿ ತಾಯಿಯ ಸಂಸ್ಕಾರಯುತ ಮಾರ್ಗದರ್ಶನ ಅವಶ್ಯ ಎಂದು ಲೇಖಕಿ ಡಾ.ಬಿವಿ ಆರತಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಶ್ರೀ ಪುತ್ತಿಗೆ ಶಾಖಾ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಆರಂಭಗೊಂಡ ಶ್ರೀಕೃಷ್ಣ ಜಯಂತ್ಯಂಗ ಅಷ್ಟೋತ್ಸವದಲ್ಲಿ ಶುಕ್ರವಾರ ಉಪನ್ಯಾಸ ನೀಡಿದ ಅವರು, ಸರ್ ಎಮ್ ವಿಶ್ವೇಶ್ವರಯ್ಯನವರು ದೊಡ್ಡ ಸಾಧಕರಾಗಿ ಬೆಳೆಯಲು ಅವರ ತಾಯಿಯ ಮಾರ್ಗದರ್ಶನ ಇತ್ತು, ತಾಯಿಯಿಂದ ಬಂದ ಸಂಸ್ಕಾರ ಬಾಲ್ಯದಲ್ಲಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದಕ್ಕೆ ಶಿವಾಜಿ ಮಹಾರಾಜರು ಉದಾಹರಣೆ ಎಂದರು.

ಶ್ರೀಕೃಷ್ಣ ಜಯಂತ್ಯಂಗ ಅಷ್ಟೋತ್ಸದ ಅಂಗವಾಗಿ ಪ್ರತಿ ದಿನ ಸಂಜೆ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಶುಕ್ರವಾರ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು. ಸೆ.2ರಂದು ಆರೋಗ್ಯಕ್ಕೆ ಹಿಂದೂ ಆಹಾರ ಪದ್ಧತಿ ವಿಚಾರವಾಗಿ ಡಾ.ಎಚ್​.ಎಸ್​.ಪ್ರೇಮಾ ಮಾತನಾಡಲಿದ್ದಾರೆ. ಸಂಜೆ 6.30ರಿಂದ ಯಕ್ಷಗಾನ ಫೌಂಡೇಷನ್​ ಕಲಾವಿದರಿಂದ ಕಂಸವಧೆ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net