

ಪುತ್ತೂರು: ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ರಾಷ್ಟ್ರೀದಅಯ ಲೋಕ್ ಅದಾಲತ್ ಶನಿವಾರ ನಡೆಯಿತು. 404 ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿ 2.03 ಕೋಟಿ ರೂ. ಪರಿಹಾರ ಮೊತ್ತ ವಿತರಣೆಗೆ ಆದೇಶಿಸಲಾಯಿತು.
ಪುತ್ತೂರು ನ್ಯಾಯಾಲಯದ 6 ವಿಭಾಗದಲ್ಲಿ ಇದ್ದ 6825 ಪ್ರಕರಣಗಳಲ್ಲಿ ಅದಾಲತ್‌ನಲ್ಲಿ 817 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಪ್ರಯತ್ನಿಸಲಾಗಿತ್ತು. ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 10 ಪ್ರಕರಣಗಳಲ್ಲಿ 6 ಪ್ರಕರಣಗಳನ್ನು ಇತ್ಯರ್ಥಪಡಿಸಿ 14,80,000 ರೂ. ಪರಿಹಾರ ವಿತರಣೆಗೆ ಆದೇಶಿಲಾಗಿದೆ. ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಮತ್ತು ಎಸಿಜೆಎಂನ 318 ಪ್ರಕರಣಗಳಲ್ಲಿ 227 ಪ್ರಕರಣಗಳನ್ನು ಇತ್ಯರ್ಥಪಡಿಸಿ 18,50,250 ರೂ. ಪರಿಹಾರ ವಿತರಣೆಗೆ ಆದೇಶಿಲಾಗಿದೆ.
ಹೆಚ್ಚುವರಿ ವ್ಯವಹಾರಿಕ ನ್ಯಾಯಾಽÃಶರು ಹಾಗೂ ಜೆಎಂಎಫ್‌ಸಿಯ 146 ಪ್ರಕರಣಗಳಲ್ಲಿ 118 ಪ್ರಕರಣಗಳನ್ನು ಇತ್ಯರ್ಥಪಡಿಸಿ 40,44,801 ರೂ. ಪರಿಹಾರ ವಿತರಣೆಗೆ ಆದೇಶಿಲಾಗಿದೆ. ಪ್ರಧಾನ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿನ 343 ಪ್ರಕರಣಗಳಲ್ಲಿ 53 ಪ್ರಕರಣಗಳನ್ನು ಇತ್ಯರ್ಥಪಡಿಸಿ 1,29,58,660 ರೂ. ಪರಿಹಾರ ವಿತರಣೆಗೆ ಆದೇಶಿಸಲಾಗಿದೆ.
ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿಯ 186 ಪ್ರಕರಣಗಳಲ್ಲಿ 109 ಪ್ರಕರಣಗಳನ್ನು ಇತ್ಯರ್ಥಪಡಿಸಿ 40,72,417 ರೂ. ಪರಿಹಾರ ವಿತರಣೆಗೆ ಆದೇಶಿಲಾಗಿದೆ. ಎರಡನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿಯ 164 ಪ್ರಕರಣಗಳಲ್ಲಿ 75 ಪ್ರಕರಣಗಳನ್ನು ಇತ್ಯರ್ಥಪಡಿಸಿ 7200 ರೂ. ಪರಿಹಾರ ವಿತರಣೆಗೆ ಆದೇಶಿಲಾಗಿದೆ.
ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಮಾನು ಕೆ.ಎಸ್., ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್‌ಪುರ, ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್., ಪ್ರಧಾನ ವ್ಯವಹಾರಿಕ ನ್ಯಾಯಾಲಯ ನ್ಯಾಯಾಧೀಶ ಶಿವಣ್ಣ ಎಚ್.ಆರ್., ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಸಲಾಯಿತು.