

ಯಲಬುರ್ಗಾ: ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 84,46,553 ರೂ. ಪರಿಹಾರ ಬಂದಿದೆ. ಪಾಲು ವಿಭಾಗ-49, ಬ್ಯಾಂಕ್ ಕೇಸ್- 9, ಭೂಸ್ವಾಧೀನ ಪ್ರಕರಣ-5, ಜೀವನಾಂಶ-2, ಚೆಕ್‌ಬೌನ್ಸ್ ಪ್ರಕರಣ-14, ಕ್ರಿಮಿನಲ್ ಪ್ರಕರಣ-32 ಹಾಗೂ 26 ಇತರ ಸೇರಿ ಒಟ್ಟು 131 ಪ್ರಕರಣ ಇತ್ಯರ್ಥಗೊಂಡವು.
ಇದನ್ನೂ ಓದಿ: ಲೋಕ್ಅದಾಲತ್ನಲ್ಲಿ 16 ಸಾವಿರ ಪ್ರಕರಣ ಇತ್ಯರ್ಥ
ಒಂದಾದ ದಂಪತಿ: ಮನಸ್ತಾಪದಿಂದ ದಾಂಪತ್ಯ ಜೀವನದಲ್ಲಿ ಬೇಸತ್ತು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ಕರಮುಡಿಯ ಶಾಂತಾ ಮತ್ತು ವೀರೇಶ ಹುಡೇದ ದಂಪತಿ ಲೋಕ ಅದಾಲತ್‌ನಲ್ಲಿ ಜೋಡಿಗೆ ಹಾರ ಹಾಕಿಸುವ ಮೂಲಕ ಒಂದುಗೂಡಿಸಿ ನ್ಯಾಯಾಧೀಶರು ಶುಭ ಹಾರೈಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ, ಸಿವಿಲ್ ನ್ಯಾಯಾಧೀಶೆ ಆಯಿಷಾಬಿ ಮಜೀದ್, ಅರ್ಜಿದಾರ ಪರ ವಕೀಲೆ ಇಂದಿರಾ ಉಳ್ಳಾಗಡ್ಡಿ, ಎದುರುದಾರರ ಪರ ವಕೀಲ ಎಚ್.ಎಚ್.ಹಿರೇಮನಿ, ದಾದು ಎಲಿಗಾರ, ವಕೀಲರಾದ ಪ್ರಕಾಶ ಬೇಲೇರಿ, ಎಸ್.ಎನ್.ಶ್ಯಾಗೋಟಿ, ರಾಜಶೇಖರ ನಿಂಗೋಜಿ, ಈರನಗೌಡ ಕೆಂಚಮ್ಮನವರ್, ಉಮಾ ಕಲ್ಲೂರು ಇತರರಿದ್ದರು.