ಸ್ತ್ರೀಯರ ಸಮಸ್ಯೆ ಕಡೆಗಣನೆ ಸಲ್ಲ : ಮಹಿಳಾ ಆಯೋಗ ಸದಸ್ಯೆ ಪಿ.ಕುಂಞ್ಞೆ ಆಯಿಶಾ ಹೇಳಿಕೆ

ayisha
Published on

ಕಾಸರಗೋಡು: ಮಹಿಳೆಯರ ಸಮಸ್ಯೆಗಳನ್ನು ಕಡೆಗಣಿಸುವ ಪ್ರವೃತ್ತಿ ಸಮಾಜದಲ್ಲಿದೆ. ಈ ಸಮಸ್ಯೆಗಳನ್ನು ಕೀಳಾಗಿ ಪರಿಗಣಿಸದೆ ಕ್ಲಪ್ತ ಸಮಯಕ್ಕೆ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪಿ.ಕುಂಞ್ಞೆ ಆಯಿಶಾ ಹೇಳಿದರು.

ಕಾಸರಗೋಡು ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್‌ನಲ್ಲಿ ಅದಾಲತ್‌ನಲ್ಲಿ ಭಾಗವಹಿಸಿದ್ದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ರಸ್ತೆ ವಿವಾದ, ಆಸ್ತಿ ವಿವಾದ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದ ದೂರುಗಳು ಆಯೋಗದ ಮುಂದೆ ಬಂದಿದ್ದವು.

ಸಭೆಯಲ್ಲಿ 43 ದೂರುಗಳನ್ನು ಪರಿಗಣಿಸಲಾಯಿತು. 13 ಕಡತಗಳು ಇತ್ಯರ್ಥವಾಗಿವೆ. 30 ಕಡತಗಳನ್ನು ಅದಾಲತ್‌ನಲ್ಲಿ ಮುಕ್ತಾಯಗೊಳಿಸಲಾಯಿತು. ಮಹಿಳಾ ಸೆಲ್ ಎಎಸ್‌ಐ ಶೈಲಜಾ, ಮಹಿಳಾ ಸೆಲ್ ಸಿಪಿಒ ಅಮೃತಾ, ಮಹಿಳಾ ಆಯೋಗದ ಎಸ್‌ಐ ಮಿನಿ ಮೋಲ್, ರಮ್ಯಾ ಮೋಳ್, ವಕೀಲೆ ಇಂದಿರಾ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net