

ಲಿಂಗಸುಗೂರು: ಪಟ್ಟಣದ ಹಿರಿಯ ಶ್ರೇಣಿ ಸಿವಿಲ್, ಪ್ರಧಾನ ಸಿವಿಲ್, ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 5744 ಕೇಸ್‌ಗಳ ಪೈಕಿ 2199 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.
ಅದಾಲತ್‌ನಲ್ಲಿ 37 ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥಪಡಿಸಿ 10,30,38,807 ರೂ., ಏಳು ಬ್ಯಾಂಕ್ ಪ್ರಕರಣಗಳನ್ನು ಇರ್ತ್ಯಗೊಳಿಸಿ 50 ಲಕ್ಷ ರೂ. ಪರಿಹಾರ ಕಲ್ಪಿಸಲಾಗಿದೆ. 1925 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 44 ಕೇಸ್‌ಗಳನ್ನು ರಾಜಿಗೊಳಿಸಿ 45,69,207 ರೂ. ಪರಿಹಾರ ಕೊಡಿಸಲಾಗಿದೆ.
ಕೌಟುಂಬಿಕ ಕಲಹದಿಂದ ದೂರವಾಗಿದ್ದ ಪತಿ-ಪತ್ನಿಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ.ಕೆ ಅವರ ಸಮ್ಮುಖದಲ್ಲಿ ಒಂದುಗೂಡಿಸಲಾಯಿತು. ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ.ಕೆ, ವಕೀಲ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ವಕೀಲರಾದ ಮಹಾಲಿಂಗಪ್ಪ, ವಿಶ್ವನಾಥ ಕರಡಕಲ್ಲ, ಹಾಜಿಬಾಬು, ವೆಂಕೋಬ ಗುಡದನಾಳ, ಶರಣಬಸವ, ಉಪೇಂದ್ರ, ಅಮರೇಶ, ಆಂಜನೇಯ, ಅರುಣ್, ಜಾಕೀರ್ ಹುಸೇನ್ ಇದ್ದರು.