

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಗ್ರಾಮದ ಬರಗಾಲಜಡ್ಡಿಯ ಎಸ್.ಆರ್. ಹೆಗಡೆ ಕುಂಬಾರಕುಳಿ ಅವರ ಅಡಕೆ ತೋಟಕ್ಕೆ ಕಾಡುಕೋಣಗಳ ಹಿಂಡು ದಾಳಿ ನಡೆಸಿ ಸುಮಾರು 50ಕ್ಕೂ ಹೆಚ್ಚು ಅಡಕೆ ಸಸಿ ಹಾಗೂ ಗಿಡಗಳನ್ನು ನಾಶಪಡಿಸಿದೆ.
ಎರಡರಿಂದ ಮೂರು ವರ್ಷದ ಅಡಕೆ ಸಸಿ ಹಾಗೂ ನಾಲ್ಕೈದು ವರ್ಷದ ಅಡಕೆ ಗಿಡ ಮತ್ತು ಫಸಲು ಬರುತ್ತಿರುವ ಅಡಕೆ ಗಿಡಗಳನ್ನು ಕಾಡುಕೋಣಗಳು ನಾಶಪಡಿಸಿದ್ದು ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಅಸಾಧ್ಯವಾಗಿದೆ. ಕಾಡುಪ್ರಾಣಿಗಳಿಂದ ಬೆಳೆ ಹಾನಿ ಆಗಬಾರದೆಂದು ಎಲ್ಲ ವ್ಯವಸ್ಥೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳಿಂದಾಗುತ್ತಿರುವ ಬೆಳೆ ಹಾನಿ ತಡೆಯಲು ತಾತ್ಕಾಲಿಕ ಯೋಜನೆಗಿಂತ ಶಾಶ್ವತ ಯೋಜನೆ ರೂಪಿಸಬೇಕು ಎಂದು ಜಿಪಂ ಮಾಜಿ ಸದಸ್ಯರೂ ಆಗಿರುವ ಎಸ್.ಆರ್. ಹೆಗಡೆ ಕುಂಬಾರಕುಳಿ ಆಗ್ರಹಿಸಿದ್ದಾರೆ.