

ನಾಪೋಕ್ಲು: ಕರಿಕೆ ಸಮೀಪದ ಎಳ್ಳುಕೊಚ್ಚಿ ನಿವಾಸಿ ಹೊಸಮನೆ ಎಂ.ರಾಘವ ಅವರ ಅಡಕೆ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಅಡಕೆ ಮತ್ತು ತೆಂಗಿನ ಫಸಲನ್ನು ನಾಶಪಡಿಸಿವೆ. ಬೆಳೆದು ನಿಂತಿದ್ದ 40ಕ್ಕೂ ಹೆಚ್ಚು ಅಡಕೆ, 10 ಕ್ಕೂ ತೆಂಗಿನ ಗಿಡಗಳನ್ನು ತುಳಿದು ಹಾಕಿದೆ.
ಈ ಭಾಗದಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದ್ದು, ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಎಷ್ಟೆ ಮನವಿ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಇಲಾಖೆ ನಷ್ಟ ಭರಿಸಿಕೊಡಬೇಕೆಂದು ಎಂದು ರಾಘವ ಒತ್ತಾಯಿಸಿದ್ದಾರೆ.